
ಎಡಮಂಗಲ ಗ್ರಾಮ ಪಂಚಾಯತ್ ಒಳಪಟ್ಟ ಕೇರ್ಪಡದಲ್ಲಿ ಸುಮಾರು 30 ವರ್ಷಗಳ ಹಿಂದೆ ನಿರ್ಮಾಣವಾದ ಬಸ್ ನಿಲ್ದಾಣ ಕುಸಿಯುವ ಭೀತಿಯಲ್ಲಿದೆ.















ಅಲೆಕ್ಕಾಡಿ, ಎಡಮಂಗಲ, ಪುಳಿಕುಕ್ಕು ರಸ್ತೆಯ ಕೇರ್ಪಡದಲ್ಲಿರುವ ನಿಲ್ದಾಣ, ಪಾಲ ಇಲ್ಲದ ಚರಂಡಿ ಹಾರಿ ನಿಲ್ದಾಣ ಪ್ರವೇಶ ಮಾಡಬೇಕು.
ಕಾಡು ಪೋದರುಗಳಿಂದ ಕೂಡಿದ್ದು ವನ್ಯಜೀವಿಗಳು ವಾಸಿಸಲು ಯೋಗ್ಯದಂತಿದೆ. ಸರಿಯಾಗಿ ನಿರ್ವಹಣೆ ಇಲ್ಲದ ಬಸ್ ನಿಲ್ದಾಣ ಬೀಳುವುದೊಂದೇ ಬಾಕಿ ಇದ್ದು ಹೊಸ ನಿಲ್ದಾಣ ನಿರ್ಮಿಸಿ ಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.












