Home Uncategorized ಮಯೂರಿ ಯುವತಿ ಮಂಡಲ ಚೊಕ್ಕಾಡಿ ವತಿಯಿಂದ ವಿದ್ಯಾರ್ಥಿಗಳಿಗೆ“ಕಸದಿಂದ ರಸ ಕಾರ್ಯಕ್ರಮ “

ಮಯೂರಿ ಯುವತಿ ಮಂಡಲ ಚೊಕ್ಕಾಡಿ ವತಿಯಿಂದ ವಿದ್ಯಾರ್ಥಿಗಳಿಗೆ“ಕಸದಿಂದ ರಸ ಕಾರ್ಯಕ್ರಮ “

0

ಯುವಜನ ಸಂಯುಕ್ತ ಮಂಡಳಿ ಸುಳ್ಯ ಹಾಗೂ ಮಯೂರಿ ಯುವತಿ ಮಂಡಲ ಚೊಕ್ಕಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಪಂಚ ಸಪ್ತತಿ 2025ರ ಅಂಗವಾಗಿ “ನಮ್ಮ ಊರು ಸ್ವಚ್ಛ ಊರು” ಧ್ಯೇಯವಾಕ್ಯದಡಿ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದ ವಿದ್ಯಾರ್ಥಿಗಳಿಗೆ “ಕಸದಿಂದ ರಸ” ಸ್ಪರ್ಧೆಗಳನ್ನು ಡಿ. 4ರಂದು ನಡೆಸಲಾಯಿತು.

ವಿದ್ಯಾರ್ಥಿಗಳಲ್ಲಿ ಸ್ವಚ್ಛತಾ ಅಭಿರುಚಿ, ಪರಿಸರ ಜಾಗೃತಿ ಹಾಗೂ ಸೃಜನಶೀಲತೆ ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮವನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಸಂಕೀರ್ಣ ಚೊಕ್ಕಾಡಿ ಉದ್ಘಾಟಿಸಿದರು.

ವೇದಿಕೆಯಲ್ಲಿ ಮಯೂರಿ ಯುವತಿ ಮಂಡಲದ ಅಧ್ಯಕ್ಷೆ ಹೇಮಾವತಿ ತಂಟೆಪ್ಪಾಡಿ ಹಾಗೂ ಶಾಲಾ ಶಿಕ್ಷಕ ಹರಿಪ್ರಸಾದ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 8 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ “ಕಸದಿಂದ ರಸ” ಸ್ಪರ್ಧೆಗಳು ನಡೆಯಿತು. ವಿದ್ಯಾರ್ಥಿಗಳು ತ್ಯಾಜ್ಯ ವಸ್ತುಗಳಿಂದ ಆಕರ್ಷಕ ಹಾಗೂ ಉಪಯುಕ್ತ ವಸ್ತುಗಳನ್ನು ತಯಾರಿಸಿ ತಮ್ಮ ಸೃಜನಶೀಲತೆಗೆ ಮೆರುಗು ನೀಡಿದರು.
ಶಾಲಾ ಶಿಕ್ಷಕರು ಹಾಗೂ ಯುವತಿ ಮಂಡಲದ ಸದಸ್ಯೆಯರು ಸಹಕರಿಸಿದರು.

NO COMMENTS

error: Content is protected !!
Breaking