ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ಕೆ. ಆರ್ ಗಂಗಾಧರವರಿಗೆ ಗೌರವಾರ್ಪಣೆ

0

ಸುಳ್ಯದ ಕೆ.ಎಸ್.ಆರ್. ಟಿ.ಸಿ ಬಸ್ ನಿಲ್ದಾಣದ ಮುಂಭಾಗದ ಸೂoತೋಡು ಎಂಪೋರಿಯಂ ಬಿಲ್ಡಿಂಗ್ ನಲ್ಲಿರುವ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ನೀಡಿದ 2024 ನೇ ಸಾಲಿನ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ, ನಿವೃತ್ತ ಪ್ರಾಂಶುಪಾಲರಾದ ಕೆ.ಆರ್ ಗಂಗಾಧರ ಅವರನ್ನು ಸಂಸ್ಥೆಯ ವತಿಯಿಂದ ಡಿ .9 ರಂದು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಪಾಲುದಾರರಾದ ಪ್ರವೀಣ್ ಬಿ.ಗೌಡ, ಸಂಜೀವ ಕೆ , ಲೋಕೇಶ್ , ಭವಿತ್, ಸಿಬ್ಬಂದಿಗಳಾದ ನಿತೀಶ್ ಕುಮಾರ್ , ಶೋಧನ್ ಉಪಸ್ಥಿತರಿದ್ದರು.