ಒಕ್ಕಲಿಗ ಗೌಡ ಸೇವಾ ಸಂಘ ಕಡಬ ತಾಲೂಕಿನ ಸುಬ್ರಹ್ಮಣ್ಯ ಹಾಗೂ ಐನೆಕಿದು ಗ್ರಾಮ ಸಮಿತಿ ವತಿಯಿಂದ ಹೊಸಮಠದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಡಿ. 10 ಶ್ರಮದಾನ ಕೈಗೊಳ್ಳಲಾಯಿತು.








ಕಡಬ ಒಕ್ಕಲಿಗ ಗೌಡ ಸಂಘದ ನಿರ್ದೇಶಕ ಚಂದ್ರಶೇಖರ ಕೋಡಿಬೈಲು ಹಾಗೂ ಹರೀಶ್ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಒಕ್ಕಲಿಗ ಗೌಡ ಗ್ರಾಮ ಸಮಿತಿ ಅಧ್ಯಕ್ಷ ಡಾl ಎ.ಎ.ತಿಲಕ ,ಐನೆಕಿದು ಗ್ರಾಮ ಸಮಿತಿ ಅಧ್ಯಕ್ಷ ದಾಮೋದರ ಗೌಡ ಕಟ್ಟೆಮನೆ, ಸುಬ್ರಮಣ್ಯ ಗ್ರಾಮ ಸಮಿತಿ ಕಾರ್ಯದರ್ಶಿ ವಿಶ್ವನಾಥ ನಡುತೋಟ, ಕೋಶಾಧಿಕಾರಿ ನಾರಾಯಣ ಅಗ್ರಹಾರ, ನಿರ್ದೇಶಕ ಗಿರಿಧರ ಸ್ಕಂದ, ಸದಸ್ಯರುಗಳಾದ ರೋಹಿತ್ ಹೊಸೋಳಿಕೆ, ಗಣೇಶ ಹೊಸೋಳಿಕೆ, ರಮೇಶ್ ಹೊಸೋಳಿಕೆ,, ಶಮಂತ ಹೊಸೋಳಿಕೆ, ಯಶೋಧರ ಹೊಸೋಳಿಕೆ, ಗುಣವರ್ಧನ ಕೆದಿಲ ಶ್ರಮದಾನದಲ್ಲಿ ಭಾಗವಹಿಸಿದ್ದರು










