Home Uncategorized ಸುಳ್ಯದಲ್ಲಿ 31 ನೇ ವರ್ಷದ ಅಯ್ಯಪ್ಪ ದೀಪೋತ್ಸವ

ಸುಳ್ಯದಲ್ಲಿ 31 ನೇ ವರ್ಷದ ಅಯ್ಯಪ್ಪ ದೀಪೋತ್ಸವ

0

ಗುರುಸ್ವಾಮಿಗಳಿಗೆ ಸನ್ಮಾನ, ಗೀತಾ ಸಾಹಿತ್ಯ ಸಂಭ್ರಮ, ಯಕ್ಷಗಾನ ಬಯಲಾಟ

ಸಾರ್ವಜನಿಕ ಶ್ರೀ ಅಯ್ಯಪ್ಪ ಸೇವಾ ಸಮಿತಿ ಸುಳ್ಯ ಇದರ ಆಶ್ರಯದಲ್ಲಿ ವರ್ಷಂಪ್ರತಿ ಜರುಗುವ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯ 31ನೇ ವರ್ಷದ ಅಯ್ಯಪ್ಪ ದೀಪೋತ್ಸವು ಸುಳ್ಯ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಡಿ. 13 ರಂದು ಜರುಗಿತು.

ಪ್ರಾತಕಾಲದಲ್ಲಿ ಪುರೋಹಿತ ನಾಗರಾಜ್ ಭಟ್ ರವರ ನೇತೃತ್ವದಲ್ಲಿ ಗಣಪತಿ ಹವನವಾಗಿ ಬಳಿಕ ಉಷಾ ಪೂಜೆಯು ನೆರವೇರಿತು. ಮಧ್ಯಾಹ್ನ ಮಹಾಪೂಜೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು.

ಸಂಜೆ ಹಳೆಗೇಟು ಬಳಿಯಿಂದ ಪಾಲ್ ಕೊಂಬು ಮೆರವಣಿಗೆಯು ಚೆನ್ನಕೇಶವ ದೇವಸ್ಥಾನದ ಬಳಿ ಪ್ರತಿಷ್ಠಾಪಿಸಿರುವ ಅಯ್ಯಪ್ಪ ಸನ್ನಿಧಾನಕ್ಕೆ ಗುರುಸ್ವಾಮಿ ಗಳವರ ನೇತೃತ್ವದಲ್ಲಿ ಚೆಂಡೆ,ವಾದ್ಯ, ಸಿಡಿಮದ್ದು ಹಾಗೂ ಬಾಲಕಿಯರಿಂದ ದೀಪಾರಾದನೆಯ ಬೆಳಕಿ ನೊಂದಿಗೆ ಅಯ್ಯಪ್ಪ ವ್ರತಧಾರಿಗಳಾಗಿ ಶರಣು ಘೋಷದೊಂದಿಗೆ ಹಾಗೂ ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಪಾಲಾರು ತಂಡದ ಸದಸ್ಯರಿಂದ ಆಕರ್ಷಕ ಕುಣಿತ ಭಜನೆಯೊಂದಿಗೆ
ಸಾಗಿ ಬಂತು.
ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ಎಂಬ ಕಾರ್ಯಕ್ರಮ ಪ್ರದರ್ಶನವಾಯಿತು.
ಮೇಲೇರಿಗೆ ಅಯ್ಯಪ್ಪ ವ್ರತಧಾರಿಗಳಿಂದ ಅಗ್ನಿಸ್ಪರ್ಶವಾದ ಬಳಿಕ
ರಾತ್ರಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಮೂಲ್ಕಿ ಯವರಿಂದ ಬಂಗಾರ್ದ ಕುರಲ್ ಎಂಬ ತುಳು ಯಕ್ಷಗಾನ ಬಯಲಾಟ ಪ್ರದರ್ಶನವಾಯಿತು. ಮರುದಿನ ಪ್ರತಕಾಲ ಅಯ್ಯಪ್ಪ ವೃತ
ಧಾರಿಗಳಿಂದ ಅಗ್ನಿಸೇವೆಯು ನಡೆಯಿತು.

ಗುರುಸ್ವಾಮಿವರ್ಯರಿಗೆ ಗೌರವ ಸನ್ಮಾನ:

ಸತತ 27 ವರ್ಷಗಳಿಂದ ಶಬರಿಮಲೆ ಯಾತ್ರೆ
ಕೈಗೊಳ್ಳುತ್ತಿರುವ
ಗುರುಸ್ವಾಮಿ ಜನಾರ್ದನ ದೋಳ ಮತ್ತು ಕಳೆದ 30 ವರ್ಷಗಳಿಂದ ಶಬರಿಮಲೆ ಯಾತ್ರೆ ಗೈದಿರುವ ಗುರುಸ್ವಾಮಿ ಸಂಜೀವ ಜಟ್ಟಿಪಳ್ಳ ರವರನ್ನು ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸಮಿತಿ ಗೌರವಾಧ್ಯಕ್ಷರು, ಗುರುಸ್ವಾಮಿಗಳಾದ ಶಿವಪ್ರಕಾಶ್ ಅಡ್ಪಂಗಾಯ, ನ್ಯಾಯವಾದಿ ರಾಮಕೃಷ್ಣ ಎ, ಸಂತೋಷ್ ಜಟ್ಟಿಪಳ್ಳ, ಕಾರ್ಯದರ್ಶಿ ಸತೀಶ್ ಕಾನತ್ತಿಲ, ಜತೆ ಕಾರ್ಯದರ್ಶಿ ಸುಧಾಕರ ಕೇರ್ಪಳ, ಉಪಾಧ್ಯಕ್ಷ ಸಂಜೀವ ಬೆಟ್ಟಂಪಾಡಿ ಉಪಸ್ಥಿತರಿದ್ದರು. ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

NO COMMENTS

error: Content is protected !!
Breaking