ಸಂಪಾಜೆ ಪ್ರಾ. ಕೃ. ಪ. ಸಂ. ನಿ 2026 ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ

0

ದ. ಕ. ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 2026 ನೇ ಸಾಲಿನ ಕ್ಯಾಲೆಂಡರನ್ನು ಸಂಘದ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆ ರವರು ಡಿ.18 ರಂದು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರು ಯಮುನಾ ಬಿ.ಎಸ್ ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ವೀರೇಂದ್ರ ಕುಮಾರ್ ಜೈನ್, ನಿರ್ದೇಶಕರಾದ ಮಹಮ್ಮದ್ ಕುಂಞಿ ಗೂನಡ್ಕ, ಗಣಪತಿ ಭಟ್ ಪಿ. ಎನ್, ಜಗದೀಶ್ ರೈ ಕೆ. ಆರ್, ಕೆ . ಪಿ ಜಾನಿ , ಪ್ರಮೀಳಾ ಪೆಲ್ತಡ್ಕ , ಜಿ.ಕೆ ಹಮೀದ್, ಜಗದೀಶ್, ಜಾನಶೀಲನ್ ರಾಜು ನೆಲ್ಲಿಕುಮೇರಿ ), ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವೀರೇಂದ್ರ ಕುಮಾರ್ ಜೈನ್ ಸರ್ವರನ್ನು ಸ್ವಾಗತಿಸಿ , ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆ ವಂದಿಸಿದರು.