ಕೊಡಗಿನ ಮಾದಾಪುರದ ಗೌಸಿಯ ಸ್ವಲಾತ್ ಕಮಿಟಿ ವತಿಯಿಂದ ಹಮೀದ್ ಕುತ್ತಮೊಟ್ಟೆಯವರಿಗೆ ಗೌರವ ಸನ್ಮಾನ

0

ಕರ್ನಾಟಕ ರಾಜ್ಯ ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮಟ್ಟೆ ಯವರಿಗೆ ಕೊಡಗು ಜಿಲ್ಲೆಯ ಮಾದಾಪುರ ಜುಮಾ ಮಸೀದಿಯ ಗೌಸಿಯ ಸ್ವಲಾತ್ ಕಮಿಟಿ ವತಿಯಿಂದ ಡಿ 18 ರಂದು ಸುಳ್ಯದ ಗ್ಯಾರಂಟಿ ಅನುಷ್ಠಾನ ಸಮಿತಿಯ ಕಚೇರಿಯಲ್ಲಿ ಗೌರವ ಸನ್ಮಾನ ನಡೆಯಿತು.

ಸ್ವಲಾತ್ ಕಮಿಟಿ ವತಿಯಿಂದ ಜನವರಿ 7,ಮತ್ತು 8 ರಂದು ನಡೆಯುವ ಸ್ವಲಾತ್ ವಾರ್ಷಿಕೋತ್ಸವ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮದ ಆಮಂತ್ರಣ ಪತ್ರ ನೀಡಲು ಬಂದ ಸಂದರ್ಭದಲ್ಲಿ ಆಮಂತ್ರಣ ಪತ್ರವನ್ನು ನೀಡಿ ಗೌರವಿಸಿದರು.

ಈ ಸಂಧರ್ಭದಲ್ಲಿ ಸ್ವಲಾತ್ ಕಮಿಟಿಯ ಅಧ್ಯಕ್ಷ ಉಮ್ಮರ್ ಮಾದಾಪುರ, ಕೋಶಾಧಿಕಾರಿ ಅಬ್ದುಲ್ಲ, ಉಪಾಧ್ಯಕ್ಷ ಅನ್ಸಾರ್,ಸದಸ್ಯರಾದ ಪಿ ಕೆ.ಕಾಸಿಂ, ಮಾದಾಪುರ ಜುಮ್ಮಾ ಮಸೀದಿಯ ಖತೀಬರಾದ ಮೊಹಮ್ಮದ್ ಶಾಫಿ ಸಖಾಪಿ, ಪತ್ರಕರ್ತ ಹಸೈನಾರ್ ಜಯನಗರ ಉಪಸ್ಥಿತರಿದ್ದರು.