ವಿಶ್ವ ದಾಖಲೆ ಬರೆದ ಸುಳ್ಯದ ಗ್ರಾಮೀಣ ಪ್ರತಿಭೆ

0

ಜಲವರ್ಣ ಚಿತ್ರ ರಚನೆಯಲ್ಲಿ ಅನುಷಾ ಜಿ.ಕೆ.ದಾಖಲೆ

ನವೆಂಬರ್ 28 ರಂದು ಸುಳ್ಯದಲ್ಲಿ 27 ನಿಮಿಷ 58 ಸೆಕೆಂಡುಗಳಲ್ಲಿ 15× 15 ಸೆಂ. ಮೀ ಗಾತ್ರದ 15 ಭೂದೃಶ್ಯಗಳ ಜಲವರ್ಣ ಚಿತ್ರಗಳನ್ನು ಕೇವಲ 5 ಬಣ್ಣಗಳನ್ನು ಬಳಸಿಕೊಂಡು ರಚಿಸುವುದರ ಮೂಲಕ ಅನುಷಾ ಜಿ.ಕೆ. ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ವಿಶ್ವ ದಾಖಲೆಯನ್ನು ಸಾಧಿಸಿದ್ದಾರೆ.

ಬಿ.ಎಡ್. ಪದವೀಧರೆಯಾಗಿರುವ ಅನುಷಾ ಅವರು ನೆಲ್ಲೂರು ಕೆಮ್ರಾಜೆ ಗ್ರಾಮದ ಕೆ. ಗಣೇಶ್ ಭಟ್ ಮತ್ತು ಜಯಲಕ್ಷ್ಮಿದಂಪತಿಗಳ ಪುತ್ರಿ.