ಲಾರಿ ಚಾಲಕನಿಗೆ ಗಾಯ
ಲಾರಿಯೊಂದು ಓಮ್ನಿ ಮೇಲೆ ಪಲ್ಟಿಯಾಗಿ ಲಾರಿ ಚಾಲಕನಿಗೆ ಗಂಭೀರ ಗಾಯಗಳಾದ ಘಟನೆ ಗೂನಡ್ಕ ಬಳಿ ಸಂಭವಿಸಿದೆ.














ಮಡಿಕೇರಿ ಕಡೆಯಿಂದ ಪೈಪ್ ಹೇರಿಕೊಂಡು ಸುಳ್ಯ ಕಡೆಗೆ ಬರುತ್ತಿದ್ದ ಲಾರಿ ಬೇಕರಿ ತಿಂಡಿ ಲೈನ್‌ಸೇಲ್ ಮಾಡಿಕೊಂಡು ಸುಳ್ಯದಿಂದ ಕಲ್ಲುಗುಂಡಿ ಕಡೆಗೆ ಹೋಗುತ್ತಿದ್ದ ಓಮ್ನಿ ಕಾರಿಗೆ ಗುದ್ದಿ ಪಲ್ಟಿಯಾಯಿತು. ಲಾರಿಯಡಿಗೆ ಓಮ್ನಿ ಸಿಲುಕಿದ್ದು, ಓಮ್ನಿಯಲ್ಲಿದ್ದ ಚಾಲಕ ಪಕ್ಕದ ಅಂಗಡಿಯಲ್ಲಿದ್ದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ.
ಜೆಸಿಬಿ ಮೂಲಕ ಲಾರಿಯನ್ನು ಮೇಲಕ್ಕೆತ್ತಲಾಗಿದ್ದು, ಲಾರಿ ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುವನ್ನು ಅಂಬ್ಯುಲೆನ್ಸ್ ಮೂಲಕ ಸುಳ್ಯ ಆಸ್ಪತ್ರೆಗೆ ಕರೆತರಲಾಯಿತು. ಲಾರಿ ಚಾಲಕ ಶಿವಮೊಗ್ಗದವರೆಂದು ತಿಳಿದು ಬಂದಿದೆ.











