ಹಿರಿಯರ ಕ್ರೀಡಾಕೂಟ: ರಾಷ್ಟ್ರ ಮಟ್ಟಕ್ಕೆ ಆಯ್ಕೆ

0

ಡಿ. 20 ಮತ್ತು 21 ರಂದು ಕೋಲಾರದ ಡಾ. ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ 44ನೇ ರಾಜ್ಯ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್ ಶಿಪ್ – 2025 ರಲ್ಲಿ 7೦ರ ವಯೋಮಾನದಲ್ಲಿ ಸುಭಾಶ್ಚಂದ್ರ ರೈ ತೋಟ 8೦ ಮೀ. ಅಡೆತಡೆ ಓಟದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ, 5೦ರ ವಯೋಮಾನದ ಬಾಲಕೃಷ್ಣ ರೈ ಪಾದೆಕಲ್ಲು ತ್ರಿವಿಧ ಜಿಗಿತದಲ್ಲಿ ಬೆಳ್ಳಿ ಪದಕ, 45 ರ ವಯೋಮಾನದ ಲೋಕೇಶ್ ಬಾಳಿಲ 8೦೦ ಮೀ. ಓಟದಲ್ಲಿ ಚಿನ್ನದ ಪದಕ, ಹರಿಪ್ರಸಾದ್ ರೈ ಬಾಳಿಲ 1೦೦ ಮೀ. ಮತ್ತು ತ್ರಿವಿಧ ಜಿಗಿತದಲ್ಲಿ ಬೆಳ್ಳಿ ಪದಕ ಪಡೆದು 2026 ಜ. 26 ರಿಂದ ಕೇರಳ ರಾಜ್ಯದ ತಿರುವನಂತಪುರ ಜಿಲ್ಲೆಯಲ್ಲಿ ನಡೆಯುವ ರಾಷ್ಟ್ರ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು ಆಯ್ಕೆ ಯಾಗಿರುತ್ತಾರೆ.