ಸುಳ್ಯದ ಸಾಯಿಶ್ರುತಿ ಪಿಲಿಕಜೆಯವರು ಮುಂಬೈಯಲ್ಲಿ ನಡೆದ ಮಿಸ್ ಕರ್ನಾಟಕ ಸ್ಟೈಲ್ ಐಕಾನ್ 2025 ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಡಿ.18ರಂದು ಮುಂಬೈಯ ಲತಾ ಮಂಗೇಶ್ಕರ್ ಅಡಿಟೋರಿಯಂನಲ್ಲಿ ಖ್ಯಾತ ಇಮೇಜ್ ಕನ್ಸಲ್ಟೆಂಟ್ ನಿಶಿತಾ ಸೂರ್ಯಕಂತ್ ಸುವರ್ಣ ಆಯೋಜಿಸಿದ ಈ ಸ್ಪರ್ಧೆಯ ಸೀಸನ್ 6ನಲ್ಲಿ ಇವರು ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಮಹಾನಟಿ 2 ಹಾಗೂ ಧ್ವನಿಮಾಯೆ ಖ್ಯಾತಿಯ ಕಲಾವಿದೆಯಾಗಿರುವ ಸಾಯಿಶ್ರುತಿಯವರು ಕುಕ್ಕುಜಡ್ಕ ಸಮೀಪದ ಪಿಲಿಕಜೆಯವರಾಗಿದ್ದು ಬೆಂಗಳೂರಿನ ಪ್ರತಿಷ್ಠಿತ ಆಭರಣ ಮಳಿಗೆಯಲ್ಲಿ ಉದ್ಯೋಗಿಯಾಗಿದ್ದಾರೆ.





















