ಸುಳ್ಯ ಸೀಮೆ ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಧನುಪೂಜೆ

0

ಕೊರೆವ ಚಳಿಯೆನ್ನದೆ ಆಗಮಿಸುತ್ತಿರುವ ಭಕ್ತ ಸಮೂಹ

ಧನುಪೂಜೆಗೆ ನಿತ್ಯ ಸಾಥ್ ನೀಡುತ್ತಿರುವ ಭಜನಾ ಮಂಡಳಿಗಳು

ಸುಳ್ಯ ಸೀಮೆ ಮಹಾತೋಭಾರ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಧನುಪೂಜೆ ದ. 16 ರಿಂದ ಆರಂಭಗೊಂಡು ನಿರಂತರವಾಗಿ ನಡೆಯುತ್ತಿದ್ದು ಈ ಭಾರಿಯ ಕೊರೆವ ಚಳಿಯ ಮಧ್ಯೆಯೂ ನೂರಾರು ಭಕ್ತರು ಪ್ರತಿದಿನ ಆಗಮಿಸಿ ಧನುಪೂಜೆಯಲ್ಲಿ ಭಾಗಿಯಾಗುತ್ತಿದ್ದಾರೆ.

ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಕೊರೆವ ಚಳಿಯಿದೆ. ಆದರೆ ಈ ಚಳಿ ಮುಂಜಾವಿನ ಧನುಪೂಜೆ ಅಡ್ಡಿಯಾಗಿಲ್ಲ. ಚಳಿ ಜಾಸ್ತಿ ಇದ್ದರೂ ಧನುಪೂಜೆಯಲ್ಲಿ ಪಾಲ್ಗೊಳ್ಳುವ ಭಕ್ತರ ಸಂಖ್ಯೆ ಕಡಿಮೆಯಾಗಿಲ್ಲ. ದಿನ ಕಳೆದಂತೆ ಭಕ್ತರ ಸಂಖ್ಯೆ ಜಾಸ್ತಿಯಾಗಿದೆ. ಇದಕ್ಕೆ ಇಲ್ಲಿನ ವ್ಯವಸ್ಥಾಪನಾ ಸಮಿತಿ, ಜೀರ್ಣೋದ್ದಾರ ಸಮಿತಿ, ಸಿಬ್ಬಂದಿ ವರ್ಗದವರೂ ಸೀಮೆಯ ಎಲ್ಲಾ ಗ್ರಾಮದ ಮುಖಂಡರ ಜೊತೆ ನಿರಂತರ ಸಂಪರ್ಕದಲ್ಲಿದ್ದು ಧನುಪೂಜೆಗೆ ಗ್ರಾಮಗಳಿಂದ ಭಕ್ತರನ್ನು ಸ್ವಾಗತಿಸುತ್ತಿದ್ದಾರೆ. ಹೊರ ಗ್ರಾಮದಿಂದ ಆಗಮಿಸುವ ಭಕ್ತರನ್ನು ಇಲ್ಲಿನ ಎಲ್ಲಾ ಸಮಿತಿಯವರು ಪ್ರೀತಿಯಿಂದ ಬರಮಾಡಿಕೊಂಡು ಅಗತ್ಯ ಮಾಹಿತಿ, ಮಾಗದರ್ಶನ ನೀಡುತ್ತಿದ್ದಾರೆ. ಇದರಿಂದಾಗಿ ಇನ್ನುಳಿದ ದಿನಗಳಲ್ಲಿ ಇನ್ನಷ್ಟು ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಳ್ಳುವ ನೀರಿಕ್ಷೆಯಿದೆ.

ಭಕ್ತರಿಗೆ ಅನುಕೂಲ ವಾಗುತ್ತಿರುವ ಅವಿನಾಶ್ ಬಸ್ ಸೇವೆ :
ಧನುಪೂಜೆಗೆ ಆಗಮಿಸುತ್ತಿರುವ ಭಕ್ತರಿಗೆ ಸುಳ್ಯದಿಂದ ಮುಂಜಾನೆ 4 ಗಂಟೆಗೆ ಅವಿನಾಶ್ ಬಸ್ ನ ಸೌಲಭ್ಯ ಹಲವು ವರ್ಷಗಳಿಂದ ನಿರಂತರವಾಗಿ ಇದೆ. ಧನುಪೂಜೆ ಮುಗಿದ ಬಳಿಕ ಮತ್ತೆ ತೊಡಿಕಾನ ದಿಂದ ಸುಳ್ಯಕ್ಕೆ ಬಸ್ಸಿನ ವ್ಯವಸ್ಥೆಯಿದೆ.

ಭಜನಾ ಸಂಘದಿಂದ ಹೆಚ್ಚಿದ ಪೂಜೆ :
ಧನುಪೂಜೆಯ ಕೆಲ ವರ್ಷಗಳಿಂದ ಈಚೆಗೆ ಪ್ರತಿದಿನ ಮುಂಜಾನೆ ವಿವಿಧ ಗ್ರಾಮಗಳ ಭಜನಾ ಮಂಡಳಿಗಳಿಂದ ಧನುಪೂಜೆಗೆ ಮೊದಲು ಭಜನಾ ಕಾರ್ಯಕ್ರಮ ನಡೆಯುತ್ತಿದೆ. ಇದರ ನೇತೃತ್ವವನ್ನು ತೊಡಿಕಾನ ಭಜನಾ ಸಂಘದ ಅಧ್ಯಕ್ಷ ಚಂದ್ರಶೇಖರ ಆಚಾರ್ಯ ಪಂಜಿಕೋಡಿ ವಹಿಸಿಕೊಂಡು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ದಿನ ಮುಂಚಿತವಾಗಿ ಭಜನಾ ಸಂಘದವರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದು ತಂಡಗಳನ್ನು ಬರಮಾಡಿಕೊಂಡು ಭಜನೆಗೆ ಬೇಕಾಗುವ ಸಂಪೂರ್ಣ ವ್ಯವಸ್ಥೆಯ ಉಸ್ತುವಾರಿ ತೆಗೆದುಕೊಂಡಿದ್ದಾರೆ. ಇದರಿಂದಾಗಿ ಪ್ರತಿ ವರ್ಷವೂ ಧನುಪೂಜೆಯ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ಭಾರಿ ದ. 28 ರ ತನಕ ಭಾಗವಹಿಸಿದ ಭಜನಾ ತಂಡಗಳು ಹೀಗಿದೆ.

ಪ್ರಥಮ ದಿನ ದ 16 ರಂದು
ಮಹಾವಿಷ್ಣು ಭಜನಾ ತಂಡ ಕಾಯರ್ತೋಡಿ,
ದ. 17 ರಂದು ಪಂಚಾಕ್ಷರಿ ಭಜನಾ ಮಂಡಳಿ ಸಂಪಾಜೆ, ದ 18 ರಂದು ಶ್ರೀ ಗಣಪತಿ ಕಲಾ ಕೇಂದ್ರ ಸುಳ್ಯ ಇವರಿಂದ ಭಜನಾ ಸೇವೆ ನಡೆದಿದೆ. ದ 19ರಂದು ಚಾಮುಂಡೇಶ್ವರಿ ಭಜನಾ ಮಂಡಳಿ ಕೊರತ್ತೋಡಿ ನೆಲ್ಲೂರು ಕೆಮ್ರಾಜೆ, ದ. 20 ವರಮಹಾಲಕ್ಷ್ಮಿ ಸಮಿತಿ ಅರಂತೋಡು, ದ. 21 ರಂದು ಶ್ರೀ ಮೂಕಾಂಬಿಕಾ ಭಜನಾ ಮಂಡಳಿ ಆರಂಬೂರು, ದ 22ರಂದು ಶ್ರೀ ಗಾಯತ್ರಿ ವಿಶ್ವಕರ್ಮ ಭಜನಾ ಮಂಡಳಿ ಮರ್ಕಂಜ ಇವರು ಸೇವೆ ಮಾಡಿರುತ್ತಾರೆ. ದ. 23 ರಂದು ಅಯ್ಯಪ್ಪ ಭಜನಾ ಮಂಡಳಿ ಅಂಗಡಿಮಜಲು ಮರ್ಕಂಜ, ದ 24 ರಂದು ಮಕ್ಕಳ ಕಲಿಕಾ ಭಜನೆ ತಂಡ ನಿಡ್ಯಮಲೆ, ದ. 25 ರಂದು ಶೃತಿ ಯುವತಿ ಮಂಡಲ ಮತ್ತು ಬಳಗ ಮರ್ಕಂಜ ಇವರು ದ. 26 ರಂದು ಮಕ್ಕಳ ಕಲಿಕಾ ಭಜನಾ ತಂಡ ಕಾರಂಟಡ್ಕ ಪೆರಾಜೆ,ದ. 27 ರಂದು ಶ್ರೀ ರಾಮ ಭಜನಾ ಮಂಡಳಿ ಮಡಪ್ಪಾಡಿ, ದ. 28 ರಂದು ಮಂಜುನಾಥೇಶ್ವರ ಭಜನಾ ಮಂಡಳಿ ಬೆಟ್ಟoಪಾಡಿ ಇವರು ಭಜನಾ ಸೇವೆಯನ್ನು ಮಾಡಿರುತ್ತಾರೆ. ಇದರ ಜೊತೆಗೆ ಶಿವಶಂಕರಿ ಮಕ್ಕಳ ಕುಣಿತ ಭಜನಾ ತಂಡ ತೊಡಿಕಾನ, ಶ್ರೀ ಮೂಕಾಂಬಿಕಾ ಕುಣಿತ ಭಜನಾ ತಂಡ ಆರಂಬೂರು, ಬಾಲ ಸಂಸ್ಕಾರ ಕುಣಿತ ಭಜನಾ ತಂಡ ಆರಂತೋಡು ಇವರಿಂದ ಕುಣಿತ ಭಜನೆಯು ನಡೆಯಿತು.

ಧನುಪೂಜೆ ಬಳಿಕ ಪ್ರತಿದಿನ ಲಘು ಉಪಹಾರದ ವ್ಯವಸ್ಥೆ ಇದ್ದು, ಇದಕ್ಕಾಗಿ ಹಲವು ಮಂದಿ ದಾನಿಗಳು ಸೇವಾಕತೃಗಳಾಗಿ ಸಹಕರಿಸುತ್ತಿದ್ದಾರೆ. ಧನುಪೂಜೆ ಮಾಡಿಸುವುವರು ಮುಂಚಿತವಾಗಿ ಬುಕ್ಕಿಂಗ್ ಮಾಡಿಸುವುದಾದರೆ ದೇವಸ್ಥಾನದ ಮೊಬೈಲ್ ಸಂಖ್ಯೆ 9483140142 ಇದನ್ನು ಸಂಪರ್ಕಿಸಬಹುದು.