ನ್ಯಾಯವಾದಿ ಎಂ.ವೆಂಕಪ್ಪ ಗೌಡರ ಆರೋಹಿ ಎನ್‌ಕ್ಲೀವ್ ಸಂಕೀರ್ಣದ ಕಚೇರಿಗೆ ಮಡಿಕೇರಿ ಶಾಸಕ ಮಂತರ್ ಗೌಡ ಭೇಟಿ _ ಗೌರವಾರ್ಪಣೆ

0

ಸುಳ್ಯ ನಗರ ಪಂಚಾಯತ್‌ ಮಾಜಿ ಅಧ್ಯಕ್ಷ, ಸುಳ್ಯದ ಹಿರಿಯ ನ್ಯಾಯವಾದಿಯಾಗಿರುವ ಎಂ.ವೆಂಕಪ್ಪ ಗೌಡರು ಸುಳ್ಯದ ಅಂಬಟೆಡ್ಕದಲ್ಲಿ ನೂತನವಾಗಿ ನಿರ್ಮಿಸಿದ ಆರೋಹಿ ಎನ್‌ಕ್ಲೀವ್ ಸಂಕೀರ್ಣದ ಕಚೇರಿಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಮಂತರ್ ಗೌಡ ಡಿ .26 ರಂದು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ವೆಂಕಪ್ಪ ಗೌಡ ದಂಪತಿ ಶಾಸಕರನ್ನು ಶಾಲು ಹೊದಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಶ್ರೀಮತಿ ಚಂಪಾ ವೆಂಕಪ್ಪ ಗೌಡ , ಪಿ.ಸಿ ಜಯರಾಮ, ಸುಪ್ರೀತ್ ಮೋoಟಡ್ಕ, ನವೀನ್ ಚಾತುಬಾಯಿ ಮೊದಲಾದವರು ಉಪಸ್ಥಿತರಿದ್ದರು.