ಕುಕ್ಕುಜಡ್ಕದಲ್ಲಿ ಸುಳ್ಯ ತಾಲೂಕು 28ನೇ ಕನ್ನಡ ಸಾಹಿತ್ಯ ಸಮ್ಮೇಳನ

0

ಶಿಕ್ಷಣ ಮತ್ತು ಸಾಹಿತ್ಯ ವಿಚಾರಗೋಷ್ಠಿ

ಕನ್ನಡ ಭಾಷಾ ಪರಂಪರೆಗೆ ಯಕ್ಷಗಾನದ ವಿಶೇಷ ಕೊಡುಗೆ: ಜಬ್ಬಾರ್ ಸಮೊ

ಸುಳ್ಯ ತಾಲೂಕು 28ನೇ ಕನ್ನಡ ಸಾಹಿತ್ಯ ಸಮ್ಮೇಳನ ಕುಕ್ಕುಜಡ್ಕದಲ್ಲಿ ನಡೆಯುತ್ತಿದ್ದು, ಮಹತ್ವದ ಶಿಕ್ಷಣ ಮತ್ತು ಸಾಹಿತ್ಯ ವಿಚಾರಗೋಷ್ಠಿ ನಡೆಯಿತು.
ಖ್ಯಾತ ಯಕ್ಷಗಾನ ಅರ್ಥದಾರಿಗಳಾದ ಜಬ್ಬಾರ್ ಸಮೋ ಸಂಪಾಜೆ ಅಧ್ಯಕ್ಷತೆ ವಹಿಸಿದ್ದರು.ಕನ್ನಡ ಭಾಷಾ ಪರಂಪರೆಗೆ ಯಕ್ಷಗಾನ ವಿಶೇಷ ಕೊಡುಗೆ ನೀಡಿದೆ ಎಂದು ಅವರು ಹೇಳಿದರು.
ಮಕ್ಕಳ ಕವಿತೆಗೆ ಹೊಸ ದಿಕ್ಕು ವಿಷಯದ ಬಗ್ಗೆ ರಾಧೇಶ್ ತೋಳ್ಪಾಡಿ, ಸಾಹಿತಿ ಮತ್ತು ಶಿಕ್ಷಣ ತಜ್ಞರಾದ ಅರವಿಂದ ಚೊಕ್ಕಾಡಿ ವರ್ತಮಾನದ ಪಠ್ಯ ಪುಸ್ತಕಗಳಲ್ಲಿ ಇತಿಹಾಸದ ಪರಿಕಲ್ಪನೆಗಳು ವಿಷಯದ ಬಗ್ಗೆ ವಿಚಾರ ಮಂಡಿಸಿದರು. ವೇದಿಕೆಯಲ್ಲಿ ಸಮ್ಮೇಳನಾದ್ಯಕ್ಷರಾದ ಕೆ.ಆರ್. ತೇಜಕುಮಾರ್ ಬಡ್ಡಡ್ಕ, ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಕಸಾಪ ಸುಳ್ಯ ಹೋಬಳಿ ಘಟಕದ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ ಸ್ವಾಗತಿಸಿ, ಕಸಾಪ ನಿರ್ದೇಶಕಿ ಚರಿಷ್ಮಾ ಕಡಪಳ ವಂದಿಸಿದರು. ಲತಾಶ್ರೀ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು.