ಕುಕ್ಕುಜಡ್ಕದಲ್ಲಿ ಸುಳ್ಯ ತಾಲೂಕು 28ನೇ ಕನ್ನಡ ಸಾಹಿತ್ಯ ಸಮ್ಮೇಳನ

0

ರಂಜಿಸಿದ ಕಾವ್ಯ- ಕುಂಚ- ಗಾಯನ

ಸುಳ್ಯ ತಾಲೂಕು 28ನೇ ಕನ್ನಡ ಸಾಹಿತ್ಯ ಸಮ್ಮೇಳನ ಕುಕ್ಕುಜಡ್ಕದಲ್ಲಿ ನಡೆಯುತ್ತಿದ್ದು, ಸಂಜೆ ನಡೆದ ಕಾವ್ಯ- ಕುಂಚ- ಗಾಯನ ನೆರೆದ ಜನರನ್ನು ರಂಜಿಸಿತು.
ಗಾಯಕರಾದ ಕೆ.ಆರ್.ಗೋಪಾಲಕೃಷ್ಣ ಯವರ ನಿರ್ವಹಣೆಯಲ್ಲಿ ಗಾಯಕರಾಗಿ ರಮೇಶ್ ಮೆಟ್ಟಿನಡ್ಕ, ಕು.ವಿಭಾಶ್ರೀ ಬೆಳ್ಳಾರೆ, ಕುಂಚದಲ್ಲಿ ಮೋನಪ್ಪ ಹೆಚ್.ಎಸ್., ಪ್ರಜ್ವಲ್ ಬಾಳುಗೋಡು ಸಹಕರಿಸಿದರು.
ಸ್ವಾಗತ ಸಮಿತಿ ಕೋಶಾಧಿಕಾರಿ ಅರುಣಕುಮಾರ್ ಮುಂಡಾಜೆ ಸ್ವಾಗತಿಸಿ, ಕಸಾಪ ನಿರ್ದೇಶಕ ಶರೀಫ್ ಜಟ್ಟಿಪಳ್ಳ ವಂದಿಸಿದರು. ಶಶ್ಮಿ ಭಟ್ ಅಜ್ಜಾವರ ಕಾರ್ಯಕ್ರಮ ನಿರೂಪಿಸಿದರು.