
ಜಿಲ್ಲಾ ಪಂಚಾಯತ್ ದಕ್ಷಿಣ ಕನ್ನಡ ಮಂಗಳೂರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮಂಗಳೂರು ಮತ್ತು ಸುಳ್ಯ ತಾಲೂಕು ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಜಾಲ್ಸೂರು, ಸಮುದಾಯ ಸಂಸ್ಥೆ ಮಂಗಳೂರು ಇದರ ಸಹಯೋಗದೊಂದಿಗೆ ಡಿ.39ರಂದು ಜಲಜೀವನ್ ಮಿಷನ್ ಮತ್ತು ಸ್ವಚ್ಚ ಭಾರತ್ ಮಿಷನ್ (ಗ್ರಾ) ಯೋಜನೆಯಡಿಯಲ್ಲಿ ಮಾಹಿತಿ ಶಿಕ್ಷಣ ಮತ್ತು ಸಂವಹನ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಕಿರು ಜಲಮೂಲಗಳ ಪುನಶ್ಚೇತನ’ ಕಾರ್ಯಕ್ರಮವನ್ನು ಜಾಲೂರು ಗ್ರಾಮ ಪಂಚಾಯತ್ ನ ಕದಿಕಡ್ಕ ಕೆರೆ ಬಳಿಯಲ್ಲಿ ಹಮ್ಮಿಕೊಳ್ಳಲಾಯಿತು. ಹಾಗೂ ಸ್ವಚ್ಚತೆಯ ಬಗ್ಗೆ ಪ್ರತಿಜಾ ವಿಧಿ ನೆರವೇರಿಸಲಾಯಿತು.















ಕಾರ್ಯಕ್ರಮದಲ್ಲಿ ಜಾಲ್ಸೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸಾವಿತ್ರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮಂಗಳೂರು ಕಾರ್ಯಪಾಲಕ ಇಂಜಿನಿಯರ್ ಜಯಪ್ರಕಾಶ್ ಇ., ಸುಳ್ಯ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸುಳ್ಯ ತಾಲೂಕು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆದ ಶ್ರೀಮತಿ ಚೈತ್ರಾ, ಜಾಲ್ಸೂರು ಗ್ರಾ.ಪಂ ಉಪಾಧ್ಯಕರಾದ ಶ್ರೀಮತಿ ತಿರುಮಲೇಶ್ವರಿ, ಜಾಲ್ಸೂರು ಗ್ರಾಮ ಪಂಚಾಯತ್ ಪಿ.ಡಿ.ಒ ಶ್ರೀಮತಿ ಶೈಲಜಾ ಎ, ಸ್ವಚ್ಛ ಭಾರತ್ ಮಿಷನ್ ಮಂಗಳೂರು ಇದರ ಐ.ಇ.ಸಿ ಡೊಂಬಯ್ಯ ಇಡ್ಕಿದು, ಜಿ.ಜಿ.ಎಂ ವಿಶ್ವ ಬ್ಯಾಂಕ್ ನ ಜಿಲ್ಲಾ ಸಂಯೋಜಕರು, ಗ್ರಾ.ಪಂ ಕಾರ್ಯದರ್ಶಿ ಸುಂದರ ಎಂ. ಗ್ರಾ.ಪಂ ಸಿಬ್ಬಂದಿ ವರ್ಗ ಸಮುದಾಯ ಸಂಸ್ಥೆ ಮುಖ್ಯಸ್ತರಾದ ಶ್ರೀ ಲಕ್ಷ್ಮೀ ನರಸಿಂಹಯ್ಯ ಮತ್ತು ಸಂಸ್ಥೆಯ ಸಿಬ್ಬಂದಿಗಳು ಜಿಲ್ಲಾ ಜೆ.ಜೆ.ಎಂ ಐ.ಇ.ಸಿ ಸಂಯೋಜಕರಾದ ಶಿವರಾಮ್, ಮಿಥುನ್ ಕೈ ಸುಳ್ಯ ತಾ.ಪಂ ಸಂಜೀವಿನಿ ವಲಯ ಮೇಲ್ವಿಚಾರಕರಾದ ಮಹೇಶ್ ಬಿ ಹಾಗೂ ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತೆಯರು ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಕುಸುಮ, ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ ಕೃಷಿಸಖಿ ವಶುಸಖಿ ಒಕ್ಕೂಟದ ಸದಸ್ಯರು ಘನತ್ಯಾಜ್ಯ ಘಟಕದ ಸಿಬ್ಬಂದಿಗಳು, ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಗ್ರಾಮಸ್ತರು ಉಪಸ್ಥಿತರಿದ್ದರು.









