













15 ವಿಭಿನ್ನ ಲ್ಯಾಂಡ್ ಸ್ಕೇಪ್ ವಾಟರ್ ಕಲರ್ ಚಿತ್ರಗಳನ್ನು 27 ನಿಮಿಷ 58 ಸೆಕೆಂಡುಗಳಲ್ಲಿ ರಚಿಸಿ IBR achiever ಎಂಬ ಶೀರ್ಷಿಕೆಯನ್ನು ಪಡೆಯುವುದರ ಮೂಲಕ ಅನುಷಾ ಜಿ.ಕೆ. ಅವರು ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಬರೆದಿದ್ದಾರೆ.
ಅನುಷಾ ಅವರು ಲೋವರ್ ಮತ್ತು ಹೈಯರ್ ಗ್ರೇಡ್ ಡ್ರಾಯಿಂಗ್ ಪರೀಕ್ಷೆಯಲ್ಲೂ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ.
ಇವರು ಪ್ರಸನ್ನ ಐವರ್ನಾಡು ಮತ್ತು ಶ್ರೀ ಹರಿ ಪೈಂಡೋಡಿ ಅವರ ಶಿಷ್ಯೆ. ಪ್ರಸ್ತುತ ಸುಬ್ರಮಣ್ಯ ಮತ್ತು ಎಲಿಮಲೆಯಲ್ಲಿ ಡೈನಮಿಕ್ ಆರ್ಟ್ಸ್ ಎಂಬ ಚಿತ್ರಕಲಾ ತರಗತಿಯನ್ನು ನಡೆಸುತ್ತಿದ್ದಾರೆ.
ಸಂಗೀತ, ನೃತ್ಯ, ಚಿತ್ರಕಲೆ, ಕೀಬೋರ್ಡ್ ಮತ್ತು ನಿರೂಪಣೆ ಯಲ್ಲೂ ಆಸಕ್ತಿ ಹೊಂದಿರುವ ಇವರು ನೆಲ್ಲೂರು ಕೆಮ್ರಾಜೆ ಗ್ರಾಮದ ಕೆ. ಗಣೇಶ್ ಭಟ್ ಹರ್ಲಡ್ಕ ಮತ್ತು ಜಯಲಕ್ಷ್ಮಿ. ಜಿ. ಕೆ ದಂಪತಿಗಳ ಪುತ್ರಿ.







