ಬಡ್ಡಡ್ಕ: ಶ್ರೀಮತಿ ಲೀಲಾವತಿ ನಾರ್ಕೋಡು ನಿಧನ

0

ಆಲೆಟ್ಟಿ ಗ್ರಾಮದ ಬಡ್ಡಡ್ಕ ನಿವಾಸಿ ಮಧುಸೂಧನ ನಾರ್ಕೋಡು ( ಮನ್ಮಥ) ರವರ ಪತ್ನಿ ಶ್ರೀಮತಿ ಲೀಲಾವತಿ ಯವರು ಜ. 2 ರಂದು ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು.

ಮೃತರು ಪತಿ, ಓರ್ವ ಪುತ್ರ ನಾಗರಾಜ್ ಬಡ್ಡಡ್ಕ, ಪುತ್ರಿಯರಾದ ಶ್ರೀಮತಿ ಪ್ರೇಮ, ಶ್ರೀಮತಿ ಕವಿತಾ, ಸೊಸೆ ಮತ್ತು ಅಳಿಯಂದಿರನ್ನು ಹಾಗೂ ಕುಟುಂಬಸ್ಥರನ್ನು, ಬಂಧು ವರ್ಗದವರನ್ನು ಅಗಲಿದ್ದಾರೆ.