ಅರಂಬೂರು : ಬೈಕ್ ಅಪಘಾತ – ಸವಾರನಿಗೆ ಗಂಭೀರ ಗಾಯ

0

ಸುಳ್ಯ ಸಮೀಪದ ಅರಂಬೂರಿನಲ್ಲಿ‌ ಬೈಕ್ ಅಪಘಾತವಾಗಿ ಸವಾರ ಗಂಭೀರ ಗಾಯಗೊಂಡಿರುವ ಘಟನೆ ಜ.5ರಂದು‌ ಮಧ್ಯಾಹ್ನ ವರದಿಯಾಗಿದೆ.

ಸುಳ್ಯದ ಸಲ್ಮಾನ್ ಗಾಯಗೊಂಡವರು. ಬೈಕ್ ಚಲಾಯಿಸಿಕೊಂಡು ಅರಂಬೂರು ರಸ್ತೆಯಲ್ಲಿ ಹೋಗುತಿದ್ದಾಗ ರಸ್ತೆ ಬದಿ ತಡೆಬೇಲಿಗೆ ಗುದ್ದಿದರೆಂದು ಪರಿಣಾಮ ಬೈಕ್ ಪಲ್ಟಿಯಾಗಿ ಸಲ್ಮಾನ್ ರಿಗೆ ಗಾಯವಾಗಿದೆ. ಅವರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.