ಬೆಳ್ಳಾರೆ : ಗೌರಿಹೊಳೆ ಸಮೀಪದ ಹಿಂದೂ ರುದ್ರಭೂಮಿ ಲೋಕಾರ್ಪಣೆ

0

ಬೆಳ್ಳಾರೆ ಗ್ರಾಮದ ಗೌರಿಹೊಳೆಯ ಹತ್ತಿರ ಇರುವ ಹಿಂದೂ ರುದ್ರಭೂಮಿ ಬೆಳ್ಳಾರೆ ಗ್ರಾಮ ಪಂಚಾಯತ್ ವತಿಯಿಂದ ಜ.05 ರಂದು ಲೋಕಾರ್ಪಣೆಗೊಂಡಿತು.
ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಉದಯಕುಮಾರ್ ಕೆ.ಟಿ.ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.


ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನಮಿತ ಎಲ್ ರೈ, ಉಪಾಧ್ಯಕ್ಷೆ ವೀಣಾ ಮೂಡಾಯಿತೋಟ
ಸಹಕಾರಿ ಸಂಘದ ಅಧ್ಯಕ್ಷ ಆರ್.ಕೆ.ಭಟ್ ಕುರುಂಬುಡೇಲು,ಪಂಚಾಯತ್ ಪಿಡಿಒ ಪ್ರವೀಣ್ ಕುಮಾರ್ ಸಿ.ವಿ, ಶ್ರೀಮತಿ ರಾಜೀವಿ ಆರ್.ರೈ, ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯ.ಸ.ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು ,ರಾಜೇಶ್ ಶ್ಯಾನುಭೋಗ್ ಮಣಿಕ್ಕಾರ,
ಗ್ರಾಮ ಪಂಚಾಯತ್ ಸದಸ್ಯರಾದ ಅನಿಲ್ ರೈ ಚಾವಡಿಬಾಗಿಲು,ಮಣಿಕಂಠ ಕಲ್ಲೋಣಿ,ದಿನೇಶ್ಚಂದ್ರ ಹೆಗ್ಡೆ,ಶ್ರೀಮತಿ ಭವ್ಯ,ಅನಿಲ್ ರೈ ಪುಡ್ಕಜೆ,ಶ್ರೀಮತಿ ಜಯಶ್ರೀ, ಚಂದ್ರಶೇಖರ ಪನ್ನೆ, ಹಾಗೂ ಗಂಗಾಧರ ರೈ ಪುಡ್ಕಜೆ, ದಿಲೀಪ್ ಗಟ್ಟಿಗಾರು, ಮಾಧವ ತಡಗಜೆ, ಪ್ರೇಮಚಂದ್ರ ಪ್ರೇಮ್ ಸ್ಡುಡಿಯೋ, ಪದ್ಮನಾಭ ಶೆಟ್ಟಿ,ಶಿವಮಣಿ ಮಣಿಯಾನಿ,ವಸಂತ ಉಲ್ಲಾಸ್,ಜಯರಾಮ ಉಮಿಕ್ಕಳ,ಶೈಲೇಶ್ ನೆಟ್ಟಾರ್, ಹರಿಣಿ ರೈ,ಸ್ಥಳೀಯ ಕಾಲೊನಿ ನಿವಾಸಿಗಳು
ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.