ಪಂಜ ಪ್ರಾಥಮಿಕ ಶಾಲೆಗೆ ಪ್ರಶಸ್ತಿ














ಪಿ.ಎಂ ಪೋಷನ್ ಯೋಜನೆಯಡಿ ಸುಳ್ಯ ತಾಲೂಕು ಪಂಚಾಯತ್ ನಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಅಕ್ಷರ ದಾಸೋಹ ಅಡುಗೆ ಸಿಬ್ಬಂದಿಗಳ ಅಡುಗೆ ಸ್ಪರ್ಧೆಯಲ್ಲಿ ಪಂಜ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ದ್ವಿತೀಯ ಪ್ರಶಸ್ತಿ ಗಳಿಸಿದೆ.ಅಡುಗೆ ಸಿಬ್ಬಂದಿಗಳಾದ ನಮಿತಾ ಪಲ್ಲೋಡಿ, ಲಿಖಿತಾ ಪಲ್ಲೋಡಿ ಹಾಗೂ ಮಂಜುಳ ಪಲ್ಲೋಡಿ ತಂಡ ಈ ಪ್ರಶಸ್ತಿ ಗಳಿಸಿದೆ.







