














ಸುಳ್ಯ ಚೆನ್ನಕೇಶವ ಕಲಾ ಮತ್ತು ಸಾಂಸ್ಕೃತಿಕ ಸಂಘದ ಆಯೋಜನೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಜ. 5 ರಂದು ಸಂಜೆ ಭಜನಾ ಸಂಕೀರ್ತನೆ ಹಾಗೂ ಕುಣಿತ ಭಜನೆಯ ದೀಪ ಪ್ರಜ್ವಲನೆಯನ್ನು ದೇವಸ್ಥಾನದ ಅರ್ಚಕರಾದ ಹರಿಕೃಷ್ಣ ರವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಬೂಡು ರಾಧಾಕೃಷ್ಣ ರೈ, ಸುಭಾಷ್ ಕುಕ್ಕಂದೂರು, ಮೋಹನ ಗೌಡ ಕೆರೆಮೂಲೆ, ಸಂಘದ ಸಂಚಾಲಕ ಲೋಕೇಶ್ ಎಸ್, ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಬಳಿಕ ಚೆನ್ನಕೇಶವ ಮಹಿಳಾ ಭಜನಾ ತಂಡದವರಿಂದ ಭಜನಾ ಸಂಕೀರ್ತನೆ ಆರಂಭಗೊಂಡಿತು.







