ಕುಕ್ಕುಜಡ್ಕ: ಅಡಿಕೆ ಕದ್ದ MP

0

ವೆಬ್ ಸೈಟ್ ನಲ್ಲಿ ಬಂದ ವರದಿ ವಿರುದ್ಧ ದೈವದ ಮೊರೆ ಹೋದ ಪಂಚಾಯತ್ ಸದಸ್ಯ

ಅಮರಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ರೊಬ್ಬರು ಅಡಿಕೆ ಕದ್ದು ಸಿಕ್ಕಿ ಬಿದ್ದಿದ್ದಾರೆ ಎಂಬ ವರದಿ ವೆಬ್ ಸೈಟೊಂದರಲ್ಲಿ ಹರಿದಾಡುತ್ತಿದ್ದು ಈ ಬಗ್ಗೆ ಪಂಚಾಯತ್ ಸದಸ್ಯ ಅಮರಪಡ್ನೂರಿನ ರಾಧಾಕೃಷ್ಣ ಕೊರತ್ಯಡ್ಕ ರವರು ದೈವದ ಮೊರೆ ಹೋದ ಘಟನೆ ವರದಿಯಾಗಿದೆ.

ನನ್ನ ಹೆಸರಿನಲ್ಲಿ ಇಲ್ಲ ಸಲ್ಲದ ಸುಳ್ಳು ವರದಿ ಪ್ರಕಟಿಸಿ
ನನ್ನ ತೇಜೋವಧೆಗಾಗಿ
ಈ ರೀತಿಯ ಕಟ್ಟು ಕತೆ ಕಟ್ಟಿ ವೆಬ್ ಸೈಟಿನಲ್ಲಿ ಪ್ರಕಟಿಸಿ ಪ್ರಚಾರ ಪಡಿಸುತ್ತಿದ್ದಾರೆ. ಇದು ಶತಸುಳ್ಳು ವರದಿಯಾಗಿದೆ. ಈ ಕುರಿತು ನನ್ನ ತರವಾಡು ನಡುಗಲ್ಲು ಚೊಕ್ಕಾಡಿ ಶ್ರೀ ಉಳ್ಳಾಕುಲು ಸಾನಿಧ್ಯ ದಲ್ಲಿ ಮತ್ತು ಚೊಕ್ಕಾಡಿ ಉಳ್ಳಾಕುಲು ಯಾನೆ ನಾಯರ್ ದೈವಸ್ಥಾನದಲ್ಲಿ ಪ್ರಾರ್ಥಿಸಿರುತ್ತೇನೆ. ನಾನು ಅಂತ ಕೆಟ್ಟ ಕೆಲಸ ಮಾಡಿಲ್ಲ. ನನ್ನ ಮೇಲೆ ಮಾನಹಾನಿಕರ ಆರೋಪ ಮಾಡಿ ವರದಿ ನೀಡಿದವರಿಗೆ ಮತ್ತು ಅದನ್ನು ಪ್ರಕಟ ಪಡಿಸಿದವರಿಗೆ ದೈವವೇ ತಕ್ಕ ಪ್ರತಿಫಲ ನೀಡಲಿ. ನಾಳೆ
ಜ.13 ರಂದು ಕೇರಳದ ಕಾನತ್ತೂರು ಕ್ಷೇತ್ರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತೇನೆ ಎಂದು ರಾಧಾಕೃಷ್ಣ ಕೊರತ್ಯಡ್ಕ ಸುದ್ದಿಗೆ ತಿಳಿಸಿದ್ದಾರೆ.