ಐವರ್ನಾಡು : ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದ ಇಬ್ಬರನ್ನು ಪಚ್ಚನಾಡಿ ನಿರಾಶ್ರಿತರ ಕೇಂದ್ರಕ್ಕೆ ಕಳುಹಿಸಿದ ಪಂಚಾಯತ್

0

ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿದು ಜನರಿಗೆ ತೊಂದರೆ ನೀಡುತ್ತಿದ್ದ ಇಬ್ಬರನ್ನು ಪಚ್ಚನಾಡಿ ನಿರಾಶ್ರಿತರ ಕೇಂದ್ರಕ್ಕೆ‌ ಕಳುಹಿಸಲಾಗಿದೆ.
ಮನೆ ಬಿಟ್ಟು ರಸ್ತೆ ಬದಿಯಲ್ಲಿ, ಮದ್ಯಪಾನ ಮಾಡಿ ಬಸ್ಸು ತಂಗುದಾಣಗಳಲ್ಲಿ,ಸರಕಾರಿ ಕಟ್ಟಡಗಳಲ್ಲಿ ಮಲಗಿ ,ಕುಳಿತು ಸಾರ್ವಜನಿಕರಿಗೆ ಕಿರಿ ಕಿರಿಯುಂಟು ಮಾಡುತ್ತಿದ್ದ ವ್ಯಕ್ತಿಗಳನ್ನು ಐವರ್ನಾಡು ಗ್ರಾಮ ಪಂಚಾಯತ್ ವತಿಯಿಂದ ಪಚ್ಚನಾಡಿ ನಿರಾಶ್ರಿತರ ಕೇಂದ್ರಕ್ಕೆ ಕಳುಹಿಸಲಾಗಿರುವುದಾಗಿ ತಿಳಿದು ಬಂದಿದೆ.