ಮುರುಳ್ಯ : ಶಾಂತಿನಗರ ನೂತನ ಅಂಗನವಾಡಿ ಕಟ್ಟಡ ಉದ್ಘಾಟನೆ

0

ಸುಳ್ಯ ಶಾಸಕರಾದ ಕು ಭಾಗೀರಥಿ ಮುರುಳ್ಯ, ಅಂಗನವಾಡಿ ಕಟ್ಟಡ ಉದ್ಘಾಟನೆ ಗಾಡ೯ನ್, ಇಂಟರ್ ಲಾಕ್ ಹಾಕುವುದು ಭರವಸೆ ಶಾಸಕರು ಭಾಗೀರಥಿ ಮುರುಳ್ಯ, ಮುರುಳ್ಯ ಶಾಂತಿನಗರ ನೂತನ ಅಂಗನವಾಡಿ ಕಟ್ಟಡ ಲೋಕಾಪ೯ಣೆಯು ಫೆ. 5 ರಂದು ನಡೆಯಿತು.

ಸುಳ್ಯ ಶಾಸಕರಾದ ಕು. ಭಾಗೀರಥಿ ಮುರುಳ್ಯ ರವರು ರಿಬ್ಬನ್ ಕಟ್ ಮಾಡಿ ಉದ್ಘಾಟಿಸಿ ದೀಪ ಪ್ರಜ್ವಲನೆ ಮಾಡಿ ಸಭೆಯಲ್ಲಿ ಮಾತನಾಡುತ್ತಾ ಅಂಗನವಾಡಿ ಕೇಂದ್ರಕ್ಕೆ ಗಾಡ೯ನ್ ಮತ್ತು ಇಂಟರ್ ಲಾಕ್ ಹಾಕುವ ಭರವಸೆ ನೀಡಿದರು. ಮುರುಳ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವನಿತಾ ಸುವಣ೯ ಅಧ್ಯಕ್ಷತೆ ವಹಿಸಿ ಶುಭಾಶಯಗಳು ಕೋರಿದರು.

ಪಂಚಾಯತ್ ಉಪಾಧ್ಯಕ್ಷೆ ಕು.ಜಾನಕಿ ಮುರುಳ್ಯ , ಸದಸ್ಯರಾದ ಶ್ರೀಮತಿ ಶೀಲಾವತಿ ಗೋಳ್ತಿಲ, ಶ್ರೀಮತಿ ಪುಷ್ಪಲತಾ ಕುಕ್ಕಟ್ಟೆ, ಮೋನಪ್ಪ ಗೌಡ ಅಲೇಕಿ, ಮುರುಳ್ಯ ಎಣ್ಮೂರು ಸೊಸೈಟಿ ಅಧ್ಯಕ್ಷ ವಸಂತ ನಡುಬೈಲು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಶೈಲಜಾ , ಪಂಜ ಕ್ಲಸ್ಟರ್ ಸಿ.ಆರ್.ಪಿ.ಜಯಂತ ಕೆ. , ಸ.ಹಿ.ಪ್ರಾ.ಶಾಲೆ ಮುರುಳ್ಯ ಶಾಂತಿನಗರ ಮುಖ್ಯ ಶಿಕ್ಷಕಿ ಸೀತಾ. ವಿ. ಬಾಲವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ಧನ್ಯಶ್ರೀ , ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಶ್ರೀಮತಿ ನಿಮ೯ಲಾ ರಾಜೇಶ್ ಉಪಸ್ಥಿತರಿದ್ದರು.ಶಿಶು ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಶ್ರೀಮತಿ ರವಿಶ್ರೀ ಕೆ. ಪ್ರಾಸ್ತಾವಿಕ ಮಾತನಾಡಿದರು. ನಿವೃತ್ತಿ ಪಡೆದ ಶ್ರೀಮತಿ ಧಮಾ೯ವತಿ ಹೊಸಮಠ , ಶ್ರೀಮತಿ ಮಾಧವಿ .ಮೀಯೋಲ್ಪೆ, ಶ್ರೀಮತಿ ಮೀರಾ ಮಾಲೆತ್ತಾರು ರವರನ್ನು ಸನ್ಮಾನಿಸಲಾಯಿತು.