ಆಲೆಟ್ಟಿ ಸದಾಶಿವ ದೇವಳದಲ್ಲಿ ಎಸ್.ಪಿ.ವೈ ಎಸ್.ಎಸ್ ವತಿಯಿಂದ ಸಾಮೂಹಿಕ ಯೋಗ ಶಿವ ನಮಸ್ಕಾರ

0

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಉತ್ಸವದಂದು ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸುಳ್ಯ ಮತ್ತು ಆಲೆಟ್ಟಿ ಶಾಖೆಯ ಸದಸ್ಯರಿಂದ ಶಿವ ಜಾಗರಣೆ, ಭಜನೆ, ಶಿವಪಂಚಾಕ್ಷರಿ ಜಪ ಶಿವ ಅಷ್ಟೋತ್ತರ ಶತನಾಮ ಪಠಣ ಬಿಲ್ವಾರ್ಚನೆ, ಸಾಮೂಹಿಕ ಯೋಗ ಶಿವ ನಮಸ್ಕಾರ ಕಾರ್ಯಕ್ರಮವನ್ನುಫೆ. 16 ರಂದು ಸದಾಶಿವ ಸಭಾಭವನದಲ್ಲಿ ಆಯೋಜಿಸಲಾಗಿತ್ತು.

ದೇವಸ್ಥಾನದ ಪ್ರಧಾನ ಅರ್ಚಕ ಹರ್ಷಿತ್ ಬನ್ನಿಂತಾಯ ರವರು ದೀಪ ಪ್ರಜ್ವಲಿಸಿದರು. ಸದಾಶಿವ ಭಜನಾ ಸಂಘದ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ಯವರು ಶುಭ ಹಾರೈಸಿದರು. ಸಹ ಅರ್ಚಕ ಗೋಪಾಲಕೃಷ್ಣ ಭಟ್, ಸೇವಾ ಸಮಿತಿ ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ ಉಪಸ್ಥಿತರಿದ್ದರು.
ಯೋಗ ಶಿಕ್ಷಕಿ ಸುನಂದ ಶೆಟ್ಟಿ, ನಿಶಿತಾ ಕೇರ್ಪಳ, ರಾಜೇಶ್ ಆಲೆಟ್ಟಿ, ವಸಂತ ಆಲೆಟ್ಟಿ, ಸುಂದರ ಆಲೆಟ್ಪಿ ಉಪಸ್ಥಿತರಿದ್ದರು. ಎಸ್. ಪಿ. ವೈ. ಎಸ್. ಎಸ್ ಸಂಸ್ಥೆಯ ಸದಸ್ಯರು ಭಾಗವಹಿಸಿದರು.