ಸುಳ್ಯದ ಸಂತ ಬ್ರಿಜಿಡ್ಸ್ ದೇವಾಲಯದಲ್ಲಿ ಕ್ರಿಸ್ತ ಶಿಕ್ಷಣ ತರಗತಿಗಳ ವಾರ್ಷಿಕೋತ್ಸವ

0

ಆದಿತ್ಯವಾರದ ಕ್ರಿಸ್ತ ಶಿಕ್ಷಣ ತರಗತಿಗಳ ವಾರ್ಷಿಕೋತ್ಸವವು ಸಂತ ಬ್ರಿಜಿಡ್ಸ್ ದೇವಾಲಯದಲ್ಲಿ ಫೆ. 22 ರಂದು ಅದ್ದೂರಿಯಾಗಿ ನಡೆಯಿತು.

ಧರ್ಮಗುರುಗಳಾದ ಆಲ್ವಿನ್ ಎಡ್ವರ್ಡ್ ಡಿಕುನ್ಹರವರು ಪವಿತ್ರ ಬಲಿಪೂಜೆಯನ್ನು ಅರ್ಪಿಸಿದರು. ನಂತರ ಸಂತ ಬ್ರಿಜಿಡ್ಜ್ ಕಲಾಮಂದಿರದಲ್ಲಿ ಸಭಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮಗುರುಗಳಾದ ಆಲ್ವಿನ್ ಡಿಕುನ್ಹಾರವರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಸುಳ್ಯ ಸಂತ ರೇಮಂಡ್ಸ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಗ್ರೇಸಿ ಡಿಸೋಜ, ಸುಳ್ಯ ಸಂತ ಅಸಿಸ್ಸಿ ಸದನ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸಿಸಿಲಿ ಸೆಭಾಸ್ಟಿಯನ್, ಪಾಲನಾ ಪರಿಷತ್ ಉಪಾಧ್ಯಕ್ಷ ಸುನಿಲ್ ಮಸ್ಕರೇನಸ್, ಆಯೋಗಗಳ ಸಂಚಾಲಕ ಐವನ್ ಡಿಸೋಜಾ ಮತ್ತು ಬ್ರದರ್ ವಿನೋದ್ ಕುಮಾರ್ ಮತ್ತು ಕ್ರಿಸ್ತ ಶಿಕ್ಷಣದ ಸಂಯೋಜಕರಾದ ಶ್ರೀಮತಿ ಜೂಲಿಯೆಟ್ ಲೋಬೋರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ರಿಸ್ತ ಶಿಕ್ಷಣ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ

ವಿದ್ಯಾರ್ಥಿಗಳನ್ನು ಮತ್ತು 100% ಹಾಜರಾತಿಯಿದ್ದ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿಗಳು ಬೈಬಲ್ ಆಧಾರಿತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಕು.ಪ್ರಿನ್ಸಿಯ ಕ್ರಾಸ್ತ ಮತ್ತು ಅಲನ್ ಪೀಟರ್ ಕಾರ್ಯಕ್ರಮವನ್ನು ನಿರೂಪಿಸಿದರು. ಜಾಸ್ಲಿನ್ ಕ್ರಾಸ್ತಾ ಸ್ವಾಗತಿಸಿ, ಅನಿಶ್ ಮಚಾದೊ ವಂದಿಸಿದರು. ಎಲ್ಲಾ ಶಿಕ್ಷಕರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.