ಲಕ್ಷ್ಮೀ ಸಹಿತ ಸತ್ಯನಾರಾಯಣ ದೇವರ ಪೂಜೆ- 22 ನೇ ವರ್ಷದ ನಿಶಿಪೂರ್ಣ ಭಜನಾ ಸಂಕೀರ್ತನೆ
ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕದ ಪಿಲಿಕಜೆ ಶ್ರೀ ಧರ್ಮಶಾಸ್ತ ಭಜನಾ ಮಂದಿರ ಹಾಗೂ ಶ್ರೀ ಗುರುದೇವ ಸೇವಾ ಬಳಗ ಪಿಲಿಕಜೆ ಇದರ ಆಶ್ರಯದಲ್ಲಿಶ್ರೀಧರ್ಮಶಾಸ್ತ ಮತ್ತು ಸಪರಿವಾರ ದೇವರ ಪ್ರತಿಷ್ಠಾವಾರ್ಷಿಕಮಹೋತ್ಸವವು ಫೆ. 24 ರಂದು ಜರುಗಿತು.














ಬೆಳಗ್ಗೆ ಅರ್ಚಕರಾದ ಶ್ರೀನಿವಾಸ್ ಹೆಬ್ಬಾರ್ ಮತ್ತು ನಾರಾಯಣ ಶಬರಾಯ ರವರ ನೇತೃತ್ವದಲ್ಲಿ ಗಣಪತಿ ಹವನವಾಗಿ 22 ನೇ ವರ್ಷದ ಅರ್ಧ ಏಕಾಹ ಭಜನೆಯ ದೀಪ ಸ್ಥಾಪನೆ ಮಾಡಲಾಯಿತು.
ನಂತರ ವಿವಿಧ ಭಜನಾ ಮಂಡಳಿಯ ಸದಸ್ಯರಿಂದ ನಿರಂತರ 12 ಗಂಟೆಗಳ ಕಾಲಭಜನಾಸಂಕೀರ್ತನೆಯು ನಡೆಯಿತು.ಬಳಿಕ
ಲಕ್ಷ್ಮಿಸಹಿತಶ್ರೀಸತ್ಯನಾರಾಯಣ ದೇವರ ಪೂಜೆಯು ಆರಂಭಗೊಂಡು ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದವಿತರಣೆಯಾಯಿತುಆಗಮಿಸಿದ ಭಕ್ತಾದಿಗಳಿಗೆ ಈ ಸಂದರ್ಭದಲ್ಲಿ ಅನ್ನ ಸಂತರ್ಪಣೆಯುನಡೆಯಿತು.

ಸಂಜೆ ಸೂರ್ಯಾಸ್ತಮಾನದ ವೇಳೆಯಲ್ಲಿ ನಿಶಿ ಪೂರ್ಣ ಭಜನಾ ಸಂಕೀರ್ತನೆಯು ಮಹಾಮಂಗಲೋತ್ಸವದೊಂದಿಗೆಸಮಾಪನಗೊಂಡಿತು.ಬಳಿಕಮಹಾಪೂಜೆಯಾಗಿಪ್ರಸಾದವಿತರಣೆಯಾಯಿತು. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಭಿವನ ಯಕ್ಷ ಕಲಾಕೇಂದ್ರ ಮಾಡಾವುಇದರಮಕ್ಕಳಿಂದ ವೀರ ಅಭಿಮನ್ಯು ಎಂಬ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

ಹಿರಿಯರಾದ ಶ್ರೀಮತಿ ಗೌರಿ, ಭಜನಾ ಮಂದಿರದ ಅಧ್ಯಕ್ಷ ಗಣೇಶ್ ಪಿಲಿಕಜೆ ಹಾಗೂ ಪದಾಧಿಕಾರಿಗಳಾದ ಪದ್ಮನಾಭ ಬೊಳ್ಳೂರು, ಚಿದಾನಂದ ಬಾಂಜಿಕೋಡಿ, ಸತೀಶ್ ಪಿಲಿಕಜೆ, ಶ್ರೀಮತಿ ಚಿತ್ರಕಲಾ ಗಣೇಶ್ ರವರು ಸರ್ವರನ್ನು ಸ್ವಾಗತಿಸಿದರು. ಸಮಿತಿಯ ಸದಸ್ಯರು ಸ್ವಯಂ ಸೇವಕರಾಗಿ ಸಹಕರಿಸಿದರು.







