ಮಾ. 9 ರಂದು ದೈವಗಳ ಸಾನಿಧ್ಯ ಬಾಲಾಲಯದಲ್ಲಿ ಪ್ರತಿಷ್ಠೆ
ಸುಳ್ಯಗಾಂಧಿನಗರನಾವೂರು ಶ್ರೀಕಲ್ಕುಡದೈವಸ್ಥಾನದ ಜೀರ್ಣೋದ್ದಾರ ಕಾರ್ಯದ ಕುರಿತು ಪೂರ್ವ ಭಾವಿ ಸಭೆಯು ಫೆ. 24 ರಂದು ದೈವಸ್ಥಾನದ ವಠಾರದಲ್ಲಿ ನಡೆಯಿತು.














ಆಡಳಿತ ಧರ್ಮದರ್ಶಿ ಮಂಡಳಿಯ ಅಧ್ಯಕ್ಷರಾದ ಪಿ. ಕೆ. ಉಮೇಶ್ ರವರು ಅಧ್ಯಕ್ಷತೆ ವಹಿಸಿದ್ದರು.
ದೈವಸ್ಥಾನದಜೀರ್ಣೋದ್ದಾರ ಕಾರ್ಯವು ಮುಂದಿನ ದಿನಗಳಲ್ಲಿ ನಡೆಯಲಿದ್ದು ಮಾ.9 ರಂದು ಹಳೆ ಗುಡಿಯಿಂದ ದೈವ ಸಾನಿಧ್ಯವನ್ನುಬಾಲಾಲಯದಲ್ಲಿ ಪ್ರತಿಷ್ಠಾಪಿಸುವ ಬಗ್ಗೆ ನಿರ್ಧರಿಸಲಾಯಿತು. ಮುಂದಿನ ಮೇ ತಿಂಗಳಿನಲ್ಲಿ ನೂತನ ಗುಡಿ ನಿರ್ಮಾಣ ಕಾರ್ಯ ಪೂರ್ಣಗೊಳಿಸಿ ಪುನ:ಪ್ರತಿಷ್ಠಾಬ್ರಹ್ಮಕಲಶೋತ್ಸವವನ್ನು ನಡೆಸುವ ಕುರಿತು ಸಮಾಲೋಚನೆನಡೆಸಲಾಯಿತು. ಆಮಂತ್ರಣ ಪತ್ರ ಮುದ್ರಣ ಹಾಗೂ ಹಂಚಿಕೆಯ ಬಗ್ಗೆ ವಿಚಾರಪ್ರಸ್ತಾಪಿಸಲಾಯಿತು

ಈ ಸಂದರ್ಭದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಇದರ ಪ್ರಧಾನ ಕಾರ್ಯದರ್ಶಿಅಕ್ಷಯ್ ಕೆ.ಸಿ, ಜೀರ್ಣೋದ್ದಾರಸಮಿತಿಯಪದಾಧಿಕಾರಿಗಳಾದ ಡಾ. ಗಿರೀಶ್ಭಾರದ್ವಾಜ್,ಅಶೋಕ್ ಪ್ರಭು ಸುಳ್ಯ, ಅವಿನಾಶ್ ಕುರುಂಜಿ ಹಾಗೂ ಆಡಳಿತ ಸಮಿತಿಯ ಸದಸ್ಯರುಗಳಾದ ಭಾಸ್ಕರಐಡಿಯಲ್,ಚಂದ್ರಶೇಖರಪಿ.ಆರ್,ಸೋಮನಾಥ ಪೂಜಾರಿ,ಕೇಶವ ನಾಯಕ್, ದಿನೇಶ್ ಕುಮಾರ್ ಕೆ. ಸಿ, ಸತ್ರಪ್ರಸಾದ್ ಕೆ, ಹರೀಶ್ ಬೂಡುಪನ್ನೆ, ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳಾದ ಎನ್. ಜಯಪ್ರಕಾಶ್ ರೈ,
ವೆಂಕಪ್ಪ ಗೌಡ ಎಂ, ರಾಮಚಂದ್ರ ಆಗ್ರೋ, ಸುಧಾಕರ ರೈ ಪೆರಾಜೆ, ಕೃಪಾಶಂಕರ ತುದಿಯಡ್ಕ, ದಿನೇಶ್ ಮಡಪ್ಪಾಡಿ, ಗಿರೀಶ್ ದೇಂಗೋಡಿ, ದಿನೇಶ್ ಮಡಪ್ಪಾಡಿ, ದೊಡ್ಡಣ್ಣ ಬರೆಮೇಲು,
ಶಶಿಕಲಾ ನೀರಬಿದಿರೆ, ತಿಮ್ಮಪ್ಪ ಗೌಡ ನಾವೂರು,ಜಗದೀಶ್, ಶಿವಪ್ರಸಾದ್ ಆಲೆಟ್ಟಿ ಮತ್ತಿತರರುಉಪಸ್ಥಿತರಿದ್ದರುಕಾರ್ಯದರ್ಶಿಅಶೋಕ ಪ್ರಭು ರವರು ಸ್ವಾಗತಿಸಿ,ಕೋಶಾಧಿಕಾರಿ ಅವಿನಾಶ್ ಕುರುಂಜಿ ವಂದಿಸಿದರು.







