ಫೆ. 25-26: ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಒತ್ತೆಕೋಲ

0

ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಕಲ್ಮಡ್ಕ ಇದರ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಒತ್ತೆಕೋಲ ನಡಾವಳಿ ಫೆ. 25 ಮತ್ತು 26 ರಂದು ನಡೆಯಲಿದೆ.
ಫೆ. 25ರಂದು ಪೂರ್ವಾಹ್ನ ಗಂಟೆ 8.30ಕ್ಕೆ ಗಣಪತಿ ಹವನ, ನವಕ ಕಲಶಾಭಿಷೇಕ, ಮೇಲೇರಿಗೆ ಕೊಳ್ಳಿ ಜೋಡಣೆ ಆರಂಭ, ಪೂ.10.30ರಿಂದ ಶ್ರೀರಾಮ ಭಜನಾ ಮಂಡಳಿ ಕಾಚಿಲ ಮತ್ತು ಗ್ರಾಮಸ್ಥರಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಗಂಟೆ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ ಗಂಟೆ 5.30ಕ್ಕೆ ಶ್ರೀ ಮಹಾವಿಷ್ಣುಮೂರ್ತಿ ದೈವದ ಭಂಡಾರ ತೆಗೆದು ಬಳಿಕ ಮೇಲೇರಿಗೆ ಅಗ್ನಿ ಸ್ಪರ್ಶ ನಡೆಯಲಿದೆ. ರಾತ್ರಿ 7.30ರಿಂದ ಧಾರ್ಮಿಕ ಸಭೆ ನಡೆದು, ರಾತ್ರಿ 10.30ರಿಂದ ಶ್ರೀ ಮಹಾವಿಷ್ಣುಮೂರ್ತಿ ದೈವದ ಕುಳಿಚಟ್ಟು, ಆಕರ್ಷಕ ಸುಡುಮದ್ದು ಪ್ರದರ್ಶನ ನಡೆಯಲಿದೆ.
ಫೆ. 26 ರಂದು ಪ್ರಾತಃಕಾಲ 5.00ಕ್ಕೆ ಶ್ರೀ ಮಹಾವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ, ಮಾರಿಕಳ, ಪ್ರಸಾದ ವಿತರಣೆ ಬಳಿಕ ಬೆಳಿಗ್ಗೆ ಗಂಟೆ 7ರಿಂದ ಶ್ರೀ ಮುಳ್ಳುಗುಳಿಗ ದೈವದ ನೇಮ, ಪ್ರಸಾದ ವಿತರಣೆ ನಡೆಯಲಿದೆ. ಫೆ. 25 ರಂದು ರಾತ್ರಿ 12.30ರಿಂದ ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ ಮುಪ್ಪೇರ್ಯ ಇದರ ನೇತೃತ್ವದ ಮಕ್ಕಳ ಯಕ್ಷಗಾನ ತಂಡದ ವತಿಯಿಂದ ಯಕ್ಷಗಾನ ಬಯಲಾಟ- ಶಿವಭಕ್ತ ವೀರಮಣಿ ನಡೆಯಲಿದೆ.