













ಸುಳ್ಯದಲ್ಲಿ ಪ್ರಪ್ರಥಮವಾಗಿ ಗ್ರಾಜುವೇಶನ್ ಡೇ ಯನ್ನು ಆರಂಭಿಸಿ ಮಾ.14ರಂದು 2 ನೇ ವರ್ಷದ ಗ್ರಾಜುವೇಶನ್ ಡೇ ಯನ್ನು ಅಂಜಲಿ ಮಾಂಟೆಸ್ಸೋರಿ ಶಾಲೆಯಲ್ಲಿ ಸಂತೋಷ ಹಾಗೂ ಉತ್ಸಾಹದಿಂದ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶ್ರೀ ಪಿ. ಎ. ಮೇದಪ್ಪ ಸರ್ ಆಗಮಿಸಿ, ಮಕ್ಕಳಿಗೆ ಪ್ರೇರಣಾದಾಯಕ ಮಾತುಗಳನ್ನು ಹೇಳಿ ಶಾಲೆಯ ಕಾರ್ಯವನ್ನು ಪ್ರಶಂಸಿಸಿದರು.ಇದೇ ವೇದಿಕೆಯಲ್ಲಿ ಅತಿಥಿ ಶ್ರೀಯುತ ಮೇದಪ್ಪರವರನ್ನು ಶಾಲಾ ಪರವಾಗಿ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಜಲಿ ಮಾಂಟೆಸ್ಸೋರಿ ಶಾಲೆಯ ಅಧ್ಯಕ್ಷರಾದ ಶ್ರೀ ಶುಭಕರ್ ಬಿ. ಸಿ. ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಂಚಾಲಕಿ ಶ್ರೀಮತಿ ಗೀತಾಂಜಲಿ ಟಿ. ಜಿ. ಅವರು ಸಹ ಉಪಸ್ಥಿತರಿದ್ದು, ಪುಟ್ಟ ಪದವೀಧರ ಮಕ್ಕಳಿಗೆ ಅಭಿನಂದನೆ ಸಲ್ಲಿಸಿದರು.
ಪದವಿ ವೇಷಭೂಷಣ ಧರಿಸಿದ ಪುಟ್ಟ ಮಕ್ಕಳು ಸಂತೋಷದಿಂದ ತಮ್ಮ ಪ್ರಮಾಣಪತ್ರ ಮೇಡಲ್ ಗಳನ್ನು ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಭಾಷಣಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮಕ್ಕಳ ಸಂಭ್ರಮವು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿತು.
ಎಲ್. ಕೆ. ಜಿ ಪುಟಾಣಿಗಳು ತಮ್ಮ ಯು. ಕೆ. ಜಿ ಪುಟಾಣಿಗಳಿಗೆ ಹಣ್ಣು , ಫ್ರೂಟ್ ಸಲಾಡ್, ಹಾಗೂ ಸಿಹಿ ಹಂಚಿದರು.
ಕಾರ್ಯಕ್ರಮ ದಲ್ಲಿ ಪುಟಾಣಿ ಪ್ರೇರಿತ್ ಪ್ರಾರ್ಥಿಸಿ , ಶ್ರೀಮತಿ. ನಿರ್ಮಲ ಸ್ವಾಗತಿಸಿ, ಶ್ರೀಮತಿ . ರೂಪಾ ವಂದಿಸಿ , ಶ್ರೀಮತಿ . ಫಬೀದಾ ಕಾರ್ಯಕ್ರಮ ನಿರೂಪಿಸಿ ಯಶಸ್ವಿಯಾಗಿ ನೆರವೇರಿತು.







