













ರಾಜ್ಯಮಟ್ಟದ ಜಂಪ್ ರೋಪ್ ಪಂದ್ಯದಲ್ಲಿ ವಿಜೇತರಾದ ಅಡ್ಕಾರಿನ ವನಸುಮ ನಿಲಯದ ಮಕ್ಕಳಿಗೆ ವನಸುಮ ನಗರ ಹಾಗೂ ನಿಲಯ ಸಮಿತಿಯ ಮಹಿಳಾ ಪದಾಧಿಕಾರಿಗಳಿಂದ
ಗೌರವ ಸಮ್ಮಾನ ಕಾರ್ಯಕ್ರಮ ಮಾ. 13 ರಂದು ನಡೆಯಿತು.
ಮಹಿಳಾ ಸಮಿತಿಯ ಮಾರ್ಗದರ್ಶಕಿ ಶ್ರೀಮತಿ ಶ್ರೀದೇವಿ ನಾಗರಾಜ್ ಭಟ್ ರವರು ಮಹಿಳಾ ಸಮಿತಿಯ ಕಾರ್ಯಚಟುವಟಿಕೆಗಳ ಬಗ್ಗೆ ವಿಸ್ತಾರವಾಗಿ ಪ್ರಾಸ್ತಾವಿಕ ಮಾತನಾಡಿದರು.
ಜಾಲ್ಸೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಗೋಪಾಲ, ಪ್ರಾಂತ ನಗರಿಯ ಮಹಿಳಾ ಪ್ರಮುಖ್ ಭಗಿನಿ ವೇದಾವತಿ, ಅಧ್ಯಕ್ಷೆ ಶ್ರೀಮತಿ ಸುಮಾ ಗೋಪಾಲ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮಕ್ಕಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ನಿಲಯದ ಸಹ ವ್ಯವಸ್ಥಾಪಕಿ ಕಾರ್ಯಕ್ರಮ ನಿರೂಪಿಸಿದರು.







