ಸುಳ್ಯದ ರಾಜೇಶ್ ಬಾರ್ ಎದುರುಗಡೆ ನಿಂತಿದ್ದ ಸುಳ್ಯ ಬೀರಮಂಗಲದ ಯುವಕನಿಗೆ ಚೂರಿಯಿಂದ ಇರಿದ ಘಟನೆ ವರದಿಯಾಗಿದೆ.















ಚೂರಿಯಿಂದ ಇರಿತಕೊಳಗಾದ ಯುವಕ ಬೀರಮಂಗಲದ ಹರೀಶ್. ಆತನ ಜತೆಗಿದ್ದ ನೀತು ಎಂಬವರಿಗೂ ಗಾಯವಾಗಿದೆ.
ಚೂರಿ ಇರಿದವರು ಕಾಂತಮಂಗಲ ದವರೆಂದು ಹೇಳಲಾಗಿದ್ದು ಅವರಿಬ್ಬರನ್ನೂ ಪೋಲೀಸರು ವಶಕ್ಕೆ ಪಡೆದಿದ್ದಾರೆ.
ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕು. ಹರೀಶ್ ಹಾಗೂ ನೀತು ರಿಗೆ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.







