













ಕೊಡಗು ಸಂಪಾಜೆ ಗ್ರಾಮದ ಅರೆಕಲ್ಲು – ಸಂಪಾಜೆ ರಸ್ತೆ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿದ್ದು, ಈ ನಿಟ್ಟಿನಲ್ಲಿ ಮಾಹಿತಿಯನ್ನು ಪಡೆದ ವಿರಾಜ ಪೇಟೆ ವಿಧಾನ ಸಭಾ ಕ್ಷೇತ್ರ ಶಾಸಕರು ಹಾಗೂ ಮುಖ್ಯಮಂತ್ರಿ ಕಾನೂನು ಸಲಹೆಗಾರರಾದ ಶ್ರೀ ಎ.ಎಸ್. ಪೊನ್ನಣ್ಣ ಅವರ ವಿಶೇಷ ಅನುದಾನದಲ್ಲಿ ಅರೆಕಲ್ಲು ರಸ್ತೆಯನ್ನು ಮರು ಡಾಮರೀಕರಣವನ್ನು ಮಾಡಲಾಯಿತು.
ಅಲ್ಲದೆ ಅರೆಕಲ್ಲು ಅಯ್ಯಪ್ಪ ಸ್ವಾಮಿಯ ಜಾತ್ರೆ ಪ್ರಾರಂಭವಾಗಿದ್ದು, ಆಗಮಿಸುವ ಭಕ್ತಾಧಿಗಳಿಗೆ, ಗ್ರಾಮಸ್ಥರಿಗೆ ಸುಗಮವಾಗಿ ಸಾಗಲು ಅನುವು ಮಾಡಿಕೊಡಲಾಯಿತು.
ಈ ಸಂದರ್ಭದಲ್ಲಿ ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಪಿ.ಎಲ್, ರಿತಿನ್ ಡೆಮ್ಮಲೆ, ಹನೀಫ್ ಎಸ್ ಪಿ. ವಿಜಯ್ ಕುಮಾರ್ ಕನ್ಯಾನ. ರಾಜೇಶ್ವರಿ ಕೆ ಕೆ. ಮೊದಲಾದವರು ಉಪಸ್ಥಿತರಿದ್ದರು.







