ಬಡ ತಾಯಿಯ ಪ್ರಾಣಉಳಿಸಲು ಬೇಕಿದೆ ನಿಮ್ಮ ನೆರವು

0

ಬದುಕಿನ ಆಸರೆಗಾಗಿ ಸಂತೆ ವ್ಯಾಪಾರ, ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡಿ ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದ ಕಾಣಿಯೂರು ಬಳಿಯ ಕೆನ್ನಾರು ನಿವಾಸಿಗಳಾದ ರಾಘವೇಂದ್ರರ ಪತ್ನಿ ರಂಜಿತಾ ದಂಪತಿಯ ಜೀವನದಲ್ಲಿ ಬರಸಿಡಿಲಿನಂತೆ ರಂಜಿತಾರಿಗೆ ಅನಾರೋಗ್ಯ ಸಮಸ್ಯೆ ಎದುರಾಗಿದೆ. ಇದರಿಂದ ಇಡೀ ಕುಟುಂಬವೇ ಕಣ್ಣೀರು ಹರಿಸುವ ಸನ್ನಿವೇಶ ನಿರ್ಮಾಣವಾಗಿದೆ. ಕೇವಲ 5 ಸೆಂಟ್ಸ್ ಜಾಗದಲ್ಲಿ ಸಣ್ಣ ಮನೆ ಹೊಂದಿದ್ದು, 2 ಪುಟ್ಟ ಮಕ್ಕಳೊಂದಿಗೆ ಕಷ್ಟದ ಬದುಕು ಸಾಗಿಸುತ್ತಿದ್ದ ರಾಘವೇಂದ್ರರ ಪತ್ನಿ ರಂಜಿತಾ ಆನಾರೋಗ್ಯದಿಂದ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಬಳಿಕ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹಲವು ಪರೀಕ್ಷೆಗಳ ಬಳಿಕ ರಕ್ತದ ಕ್ಯಾನ್ಸರ್ ಎಂದು ತಿಳಿದುಬಂದಿದ್ದು, ಬಡಕುಟುಂಬಕ್ಕೆ ಈಗ ದಿಕ್ಕು ತೋಚದಂತಾಗಿದೆ. ಎರಡು ಪುಟ್ಟ ಮಕ್ಕಳು. ಅಮ್ಮನ ವಾತ್ಸಲ್ಯದಿಂದ ವಂಚಿತರಾಗದಂತೆ ಬಡಜೀವವನ್ನು ಉಳಿಸಬೇಕಾದರೆ ಸುಮಾರು 9-10 ಲಕ್ಷ ಹಣದ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿರುವುದಾಗಿ ತಿಳಿದುಬಂದಿದೆ. ಈಗ
ದಾನಿಗಳ ಆರ್ಥಿಕ ಸಹಾಯ ಅತ್ಯಂತ ಅಗತ್ಯವಾಗಿ ಬೇಕಾಗಿದೆ. ಆದ್ದರಿಂದ ಉದಾರ ಮನಸ್ಸು ಮಾಡಿ ಆರ್ಥಿಕ ನೆರವು ನೀಡುವ‌ ಮೂಲಕ ರಂಜಿತಾ ಜೀವ ಉಳಿಸುವ ಕಾರ್ಯಕ್ಕೆ ಕೈಜೋಡಿಸುವಂತೆ ರಾಘವೇಂದ್ರರು ಮನವಿ ಮಾಡಿಕೊಂಡಿದ್ದಾರೆ.

A/c No : 70660100003983
IFSC : BARBOVJKANI
Name
: Raghavendra K
Phone : +919483407632