













ಕರ್ನಾಟಕ ರಾಜ್ಯ ಟೈಲರ್ ಅಸೋಸಿಯೇಷನ್ ಸುಳ್ಯ ವಲಯದ ಸಭೆಯು ಸುಳ್ಯದ ಜನತಾ ಬಿಲ್ಡಿಂಗ್ ನಲ್ಲಿರುವ ರಜನಿ ಕಲರ್ಸ್ ಟೈಲರ್ ಶಾಪ್ ಇಲ್ಲಿ ನಡೆಯಿತು.
ತಾಲೂಕು ಅಧ್ಯಕ್ಷರಾದ ರವೀಂದ್ರ ಸುಬ್ರಮಣ್ಯ, ಜಿಲ್ಲಾ ಉಪಾಧ್ಯಕ್ಷರಾದ ಲಿಗೋಧರ ಸುಳ್ಯ, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ರೈ ಇವರ ಉಪಸ್ಥಿತಿಯಲ್ಲಿ ಸಭೆಯನ್ನು ನಡೆಸಲಾಯಿತು
ಈ ಸಂದರ್ಭದಲ್ಲಿ 2026 – 2028 ರ ಅವಧಿಗೆ ಸುಳ್ಯ ವಲಯದ ಪದಾಧಿಕಾರಿಗಳನ್ನು ನೇಮಿಸಲಾಯಿತು.
ಅಧ್ಯಕ್ಷರಾಗಿ ಕುಸುಮಾಧರ ರೈ ಬೂಡು, ಪ್ರಧಾನ ಕಾರ್ಯದರ್ಶಿಯಾಗಿ ಪುಷ್ಪಲತಾ ಬೆಟ್ಟoಪಾಡಿ, ಕೋಶಾಧಿಕಾರಿಯಾಗಿ ಹೇಮಾವತಿ ಅತ್ಯಡ್ಕ ಪುನರ್ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಬಾಬು ಮಣಿಯಾಣಿ, ಸಂಘಟನಾ ಕಾರ್ಯದರ್ಶಿಗಳಾಗಿ ವಿಶ್ವನಾಥ ಪಾಟಾಳಿ, ರವೀಂದ್ರ ಮಾಸ್ಟರ್ ಟೈಲರ್, ಕಿರಣ ಕುಮಾರಿ ಬೆಟ್ಟoಪಾಡಿ,
ಭಾರತಿ ದಾಮೋದರ್ ಇವರುಗಳನ್ನು ಆಯ್ಕೆ ಮಾಡಲಾಯಿತು.
ಕುಸುಮಾದರ ರೈ ಬೂಡು ಸ್ವಾಗತಿಸಿ, ರಜನಿ ಕಲರ್ಸ್ ಟೈಲರ್ ಧನ್ಯವಾದ ಸಮರ್ಪಣೆ ಮಾಡಿದರು.







