ಸುಳ್ಯ ನೆಹರೂ ಸ್ಮಾರಕ ಮಹಾವಿದ್ಯಾಲಯ ಎನ್. ಎಸ್ ಎಸ್ ಘಟಕದ ಏಕದಿನ ಶಿಬಿರ

0

ಸುಳ್ಯದ ನೆಹರು ಸ್ಮಾರಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಅಜ್ಜಾವರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಏಕದಿನ ಶಿಬಿರವನ್ನು ಮಾ. 14 ರಂದು ಹಮ್ಮಿಕೊಳ್ಳಲಾಗಿತ್ತು. ಶಿಬಿರದ ಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದ ಉದ್ಘಾಟನೆಯನ್ನು ದೇವಸ್ಥಾನದ ಧರ್ಮದರ್ಶಿಗಳಾದ ಭಾಸ್ಕರ್ ರಾವ್ ಬಯಂಬು ನೆರವೇರಿಸಿದರು.

ಪ್ರಧಾನ ಅರ್ಚಕರಾದ ವಿನಾಯಕ್ ಭಟ್ ಹಾಗೂ ಜಾತ್ರೋತ್ಸವ ಸಮಿತಿ ಅಧ್ಯಕ್ಷರಾದ ಬೆಳ್ಯಪ್ಪ ಮೂಡೂರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನಂತರ ದೇವಸ್ಥಾನ ವಠಾರವನ್ನು ಸ್ವಚ್ಛತೆ ಮಾಡಲಾಯಿತು. ನೆಹರೂ ಮೆಮೋರಿಯಲ್ ಕಾಲೇಜಿನ ರಕ್ಷಕ- ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಶಶ್ಮಿ ಭಟ್ ಅಜ್ಜಾವರ ಸ್ವಾಗತಿಸಿ, ಶಿಬಿರಾಧಿಕಾರಿ ಹರಿಪ್ರಸಾದ್ ಅತ್ಯಾಡಿ ವಂದಿಸಿದರು.

ಶಿಬಿರಾಧಿಕಾರಿ ಶ್ರೀಮತಿ ಚಿತ್ರಲೇಖ ಕೆ. ಎಸ್ ಪ್ರಾಸ್ತಾವಿಕ ಮಾತುಗಳನಾಡಿದರು. ಕು. ಅಂಬಿಕಾ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಶ್ರೀ ಮಹಿಷಮರ್ದಿನೀ ಸೇವಾ ಟ್ರಸ್ಟ್ ನ ಉಪಾಧ್ಯಕ್ಷೆ ಶ್ರೀಮತಿ ಸವೇರಾ ರೈ ಬೇಲ್ಯ , ಜಾತ್ರೋತ್ಸವ ಸಮಿತಿ ಕಾರ್ಯದರ್ಶಿ ನಾರಾಯಣ ಬಂಟ್ರಬೈಲು, ಸೇವಾ ಟ್ರಸ್ಟ್ ಸದಸ್ಯರಾದ ಶ್ರೀಮತಿ ಹರಿಣಾಕ್ಷಿ ರೈ ಬೇಲ್ಯ, ಶ್ರೀಮತಿ ಲೀಲಾ ಮಾರ್ಗ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇವಾಪ್ರತಿನಿಧಿ ಶ್ರೀಮತಿ ವೇದಾವತಿ ಕರ್ಲಪ್ಪಾಡಿ, ಅಜ್ಜಾವರ ಪ್ರತಾಪ ಯುವಕ ಮಂಡಲದ ಸದಸ್ಯರುಗಳಾದ ರವಿ ನಾರಲು, ವಿನಯ್ ನಾರಲು, ಚೈತ್ರ ಯುವತಿ ಮಂಡಲ ಗೌರವ ಸಲಹೆಗಾರರಾದ ಶ್ರೀಮತಿ ಜಯಲಕ್ಷ್ಮಿ ಸಂಜೀವ ರಾವ್, ಸದಸ್ಯೆ ಶ್ರೀಮತಿ ರಜನಿ ಗೋರಡ್ಕ ಹಾಗೂ ಶಿಬಿರದ ನಾಯಕ ನಾಯಕಿಯರು, ಊರಿನವರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.