ಸುಳ್ಯ ನ್ಯಾಯಾಲಯದಲ್ಲಿ ಲೋಕ ಅದಾಲತ್

0

ಒಟ್ಟು 552 ಪ್ರಕರಣಗಳಲ್ಲಿ 325 ಪ್ರಕರಣಗಳು ರೂ. 59,85,549/- ಇತ್ಯರ್ಥ

ಸುಳ್ಯ ನ್ಯಾಯಾಲಯದಲ್ಲಿ ಮಾ 14 ರಂದು ನಡೆದ ಲೋಕ ಅದಾಲತ್ ನಲ್ಲಿ ಪ್ರಧಾನ ಹಿರಿಯ ಒಟ್ಟು 325 ಪ್ರಕರಣಗಳಲ್ಲಿ ರೂ 59,85,549 ರೂ ಇತ್ಯರ್ಥಗೊಂಡಿರುತ್ತದೆ.

ಸುಳ್ಯ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಬಿ ಮೋಹನ್ ಬಾಬು ರವರು ಮತ್ತು ಸಂಧಾನಕಾರರ ಸಮ್ಮುಖದಲ್ಲಿ ಇತ್ಯರ್ಥಗಳು ನಡೆಯಿತು.

ಸಿವಿಲ್ ನ್ಯಾಯಾಲಯದಲ್ಲಿ ಒಟ್ಟು 382 ಪ್ರಕರಣಗಳಲ್ಲಿ 201 ಪ್ರಕರಣಗಳು ರೂ. 56,37,467/- ಇತ್ಯರ್ಥ ಗೊಂಡಿರುತ್ತದೆ… ಅದರಲ್ಲಿ (ಕ್ರಿಮಿನಲ್ ಪ್ರಕರಣಗಳು 225 ರಲ್ಲಿ 173 ಪ್ರಕರಣಗಳು ರೂ. 28,82,467/- ರ ಮೂಲಕ ಹಾಗೂ ಸಿವಿಲ್ ಪ್ರಕರಣಗಳು 157 ರಲ್ಲಿ 28 ಪ್ರಕರಣಗಳು ರೂ. 27,55,000/- ರ ಮೂಲಕ ಇತ್ಯರ್ಥಗೊಂಡಿರುತ್ತದೆ.

ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಒಟ್ಟು 170 ಪ್ರಕರಣಗಳಲ್ಲಿ 124 ಪ್ರಕರಣಗಳು ರೂ. 3,48,082/- ಇತ್ಯರ್ಥ ಗೊಂಡಿದ್ದು ಅದರಲ್ಲಿ (ಕ್ರಿಮಿನಲ್ ಪ್ರಕರಣಗಳು 155 ರಲ್ಲಿ 119 ಪ್ರಕರಣಗಳು ರೂ. 5950/- ರ ಮೂಲಕ ಹಾಗೂ ಸಿವಿಲ್ ಪ್ರಕರಣಗಳು 15 ರಲ್ಲಿ 5 ಪ್ರಕರಣಗಳು ರೂ. 3,42,132/- ರ ಮೂಲಕ ಇತ್ಯರ್ಥಗೊಂಡಿರುತ್ತದೆ.

(ಪ್ರಿ ಲಿಟಿಗೇಷನ್ ಕೇಸ್ಸ್ ) ಪೂರ್ವ ವ್ಯಾಜ್ಯ ಪ್ರಕರಣಗಳಲ್ಲಿ ಬ್ಯಾಂಕ್ ರಿಕವರಿ 29 ಪ್ರಕರಣಗಳು ರೂ. 70,58,324/- ಕ್ಕೆ ಇತ್ಯರ್ಥ ಗೊಂಡಿರುತ್ತದೆ.. ಆಸ್ತಿ ತೆರಿಗೆಯು 606 ಜನರಿಂದ ರೂ. 12,45,000/- ಸಂಗ್ರಹವಾಗಿರುತ್ತದೆ.

ಸುಳ್ಯ, ಬೆಳ್ಳಾರೆ, ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಟ್ರಾಫಿಕ್ ಚಾಲನ್ ಮೂಲಕ 1431 ಜನರಿಂದ ರೂ. 6,66,300 /- ಸಂಗ್ರಹವಾಗಿರುತ್ತದೆ.