













ಮಂಗಳೂರಿನ ಶ್ರೀನಿವಾಸ್ ಕಾಲೇಜ್ ಆಫ್ ಫಾರ್ಮಸಿ ಇಲ್ಲಿ ವ್ಯಾಸಂಗ ಮಾಡಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ನಡೆಸಿದ ಎಂ. ಫಾರ್ಮ್ . (ಇಂಡಸ್ಟ್ರಿಯಲ್ ಫಾರ್ಮಸಿ )ಪರೀಕ್ಷೆಯಲ್ಲಿ ಕು.ಸ್ವಸ್ತಿಕಾ ಪ್ರಥಮ ರ್ಯಾಂಕ್ ಪಡೆದಿದ್ದಾರೆ.
ಸ್ವಸ್ತಿಕಾ ರವರು ಅರಂತೋಡು ಎನ್ನೆಂಪಿಯುಸಿ ಉಪನ್ಯಾಸಕ ಸುರೇಶ್ ವಾಗ್ಲೆ ಮತ್ತು ಬೆಳ್ಳಾರೆಕೆಪಿಎಸ್ ಪ್ರೌಢಶಾಲಾ ಶಿಕ್ಷಕಿ ಶ್ರೀಮತಿ ಸಂಧ್ಯಾಕುಮಾರಿ ಬಿ. ಎಸ್. ದಂಪತಿಯ ಪುತ್ರಿ. ಮಂಡೆಕೋಲು ಗ್ರಾಮದ ಬೊಳುಗಲ್ಲು ಶ್ರೀಧರ ನಾಯಕ್ – ಜಯಶ್ರೀ ದಂಪತಿಗಳ ಮೊಮ್ಮಗಳು.
ಅರಂತೋಡು ಸ.ಹಿ.ಪ್ರಾ.ಶಾಲೆ, ಸುಳ್ಯ ಸೈಂಟ್ ಬ್ರಿಜಿಡ್ ಸ್ಕೂಲ್ ಸುಳ್ಯ, ಕೆ.ವಿ.ಜಿ. ಆಂಗ್ಲ ಮಾಧ್ಯಮ ಸ್ಕೂಲ್ ಸುಳ್ಯ, ಎನ್ನೆಂಪಿಯುಸಿ ಅರಂತೋಡು ಇಲ್ಲಿಯ ಹಿರಿಯ ವಿದ್ಯಾರ್ಥಿ.







