ಕುರುಂಜಿ ಭಾಗ್ ನ ಶ್ರೀ ದೇವರಾಜು ಅರಸು ಪೋಸ್ಟ್ ಮೆಟ್ರಿಕ್ ಹೆಣ್ಣು ಮಕ್ಕಳ ವಸತಿ ನಿಲಯದಲ್ಲಿ ಮಹಿಳಾ ದಿನಾಚರಣೆ

0

ಹೆಣ್ಣೊಂದು ಕಲಿತರೆ ಮನೆಯೊಂದು ಬೆಳಗಿದಂತೆ. ಇಂದು ಎಲ್ಲಾ ರಂಗದಲ್ಲಿಯೂ ಮಹಿಳೆ ಸಾಧನೆ ಮಾಡಿದ್ದಾಳೆ. ಸಾಧಕರನ್ನು ಗೌರವಿಸುವ ಮೂಲಕ ಮಹಿಳಾ ದಿನಾ ಚರಣೆ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಸಲಾಗಿದೆ ಎಂದು ಮಹಿಳಾ ಮೋರ್ಚಾ ಸುಳ್ಯ ಮಂಡಲ ಅಧ್ಯಕ್ಷೆ ಇಂದಿರಾ ಬಿ.ಕೆ ಹೇಳಿದರು.

ಅವರು ಸುಳ್ಯ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಶ್ರೀ ದೇವರಾಜು ಅರಸು ಪೋಸ್ಟ್ ಮೆಟ್ರಿಕ್ ಹೆಣ್ಣು ಮಕ್ಕಳ ವಸತಿ ನಿಲಯ ಕುರುಂಜಿ ಭಾಗ್ ಇಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಹಿಳಾ ದಿನಾಚರಣೆ ಕುರಿತು ಜಿಲ್ಲಾ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಗುಣವತಿ ಕೊಲ್ಲಂತಡ್ಕ ಮಾಹಿತಿ ನೀಡಿದರು.ವಕೀಲೆ ಶ್ರೀಮತಿ ಪ್ರತಿಭಾ ಜ್ಯೋತಿ ಇವರು ಕಾನೂನು ಮಾಹಿತಿ ನೀಡಿದರು. ವಸತಿ ನಿಲಯಗಳ ತಾಲೂಕು ಅಧಿಕಾರಿ ಶ್ರೀಮತಿ ವೀಣಾ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಪುಷ್ಪ ಮೇದಪ್ಪ ಅತಿಥಿಗಳಾಗಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಕೃಷಿ ಸಖಿ ಮೋಹಿನಿ ವಿಶ್ವನಾಥ, ಹಾಗೂ ಕಲೆ ಸಾಧಕಿ ಸಂಧ್ಯಾ ಮಂಡೆಕೋಲು ರವರನ್ನು ಗೌರವಿಸಲಾಯಿತು. ಕು. ರಕ್ಷಾ ಭಾವಗೀತೆ ಹಾಡಿದರು.

ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶಶಿಕಲಾ ಎ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಮೋರ್ಚಾ ಕಾರ್ಯದರ್ಶಿ ಶ್ರೀಮತಿ ಭಾರತಿ ಪುರುಷೋತ್ತಮ್ ಸಾಧಕರ ಸನ್ಮಾನ ಪತ್ರ ವಾಚಿಸಿದರು.ಮಹಿಳಾ ಮೋರ್ಚಾ ಸದಸ್ಯರಾದ ಶ್ರೀಮತಿ ಸುಮತಿ ವಂದಿಸಿದರು.

ಮಹಿಳಾ ಮೋರ್ಚಾ ಕಾರ್ಯದರ್ಶಿ ಜಾನಕಿ ಮುರುಳ್ಯ ಸದಸ್ಯರುಗಳಾದ ಶ್ರೀಮತಿ ಶಶಿಕಲಾ ಬೇಲ್ಯ, ಶ್ರೀಮತಿ ಸಂಧ್ಯಾ , ಒಬಿಸಿ ಮೋರ್ಚಾ ಸದಸ್ಯರಾದ ಶ್ರೀಮತಿ ಚಂದ್ರಾವತಿ, ಶ್ರೀಮತಿ ವಿನೋದ ರೈ ಹಾಗೂ ವಸತಿ ನಿಲಯಗಳ ವಾರ್ಡನ್ಗಳು ಹಾಗೂ ಕುರುಂಜಿ ಭಾಗ್ ವಸತಿ ನಿಲಯದ ಮಕ್ಕಳು ಉಪಸ್ಥಿತರಿದ್ದರು.