ಆಂಧ್ರಪ್ರದೇಶದ ಶ್ರೀಶೈಲ ದೇವಸ್ಥಾನದಲ್ಲಿ ನಡೆಯುತ್ತಿರುವ ಯುಗಾದಿ ಸಂಭ್ರಮದಲ್ಲಿ ಶುಭದಾ ಆರ್. ಪ್ರಕಾಶ್ ತಂಡ ಭಾಗಿ

0

ಸರಿಗಮಪ ಲಿಟ್ಲ್ ಚಾಂಪ್ ಜೀ ಕನ್ನಡ ಖ್ಯಾತಿಯ ಶುಭದಾ. ಆರ್.ಪ್ರಕಾಶ್ ರವರ ತಂಡ ಆಂಧ್ರಪ್ರದೇಶದ ಶ್ರೀಶೈಲ ದೇವಸ್ಥಾನದಲ್ಲಿ ನಡೆಯುತ್ತಿರುವ ಯುಗಾದಿ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಕ್ತಿಗೀತೆ ಜಾನಪದ ಗೀತೆ ಹಾಗೂ ಶಾಸ್ತ್ರೀಯ ಸಂಗೀತ ವನ್ನು ಪ್ರಸ್ತುತಪಡಿಸುತ್ತಿದ್ದಾರೆ.

ಈ ಕಾರ್ಯಕ್ರಮವು ದಿನಾಂಕ 14 ರಿಂದ 18 ವರೆಗೆ ನಡೆಯುತ್ತಿದ್ದು ಸತತ ಆರು ವರ್ಷಗಳಿಂದ ಭಾಗವಹಿಸುತ್ತಿದ್ದಾರೆ. ಪ್ರಸ್ತುತ ಇವರು ಬೆಂಗಳೂರಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಎಂ.ಬಿ.ಎ ವಿಭಾಗ ದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸುಳ್ಯದ ಸೂರ್ತಿಲ ನಿವಾಸಿ ರವಿಪ್ರಕಾಶ್ ಸಿ.ಪಿ. ಮತ್ತು ಜಯಶ್ರೀ ಆರ್. ಪ್ರಕಾಶ್ ದಂಪತಿಗಳ ಪುತ್ರಿ.