













ಮಂಡೆಕೋಲು ಗ್ರಾಮದ ಮುರೂರು ನಿವಾಸಿ, ಸುಳ್ಯ ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಪ್ರಭಾಕರ ನಾಯಕ್ ಮುರೂರು ರವರ ಧರ್ಮಪತ್ನಿ ಶ್ರೀಮತಿ ರೋಹಿಣಿಯವರಿ ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಮಾ.15ರಂದು ಮುಂಜಾನೆ ನಿಧನರಾದರು. ಅವರಿಗೆ ಸುಮಾರು 70 ವರ್ಷ ವಯಸ್ಸಾಗಿತ್ತು.
ರೋಹಿಣಿಯವರು ಮಾ.14ರಂದು ಶನಿವಾರ ಮನೆಯಲ್ಲಿ ಕೆಲಸ ಮಾಡುವಾಗ ಬಿದ್ದಿದ್ದರು. ಈ ವೇಳೆ ಮನೆಯಲ್ಲಿ ಅವರ ಪತಿ ಇರಲಿಲ್ಲ. ಸಂಜೆ ಪ್ರಭಾಕರರು ಮನೆಗೆ ಬಂದಾಗ ರೋಹಿಣಿಯವರು ತಾನು ಬಿದ್ದಿರುವ ಹಾಗೂ ತನಗೆ ತಲೆ ನೋವು ಆಗುತ್ತಿದೆ ಎಂದು ಹೇಳಿದರೆಂದೂ, ತಕ್ಷಣ ಅವರನ್ನು ಸುಳ್ಯ ಆಸ್ಪತ್ರೆಗೆ ಕರೆತಂದು ಬಳಿಕ ವೈದ್ಯರ ಸಲಹೆ ಮೇರೆಗೆ ಮಂಗಳೂರು ಆಸ್ಪತ್ರೆಗೆ ಕರೆದೊಯ್ದರು. ಆದರೆ ಫಲಕಾರಿಯಾಗದೇ ಮಾ.15ರಂದು ಮುಂಜಾನೆ ಮೃತರಾದರು.
ರೋಹಿಣಿಯವರು ಪತಿ, ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.







