ಪೈಚಾರು- ಶಾಂತಿನಗರ ಮುತ್ತಪ್ಪ- ತಿರುವಪ್ಪ ದೈವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ

0

ಶ್ರೀ ಮುತ್ತಪ್ಪ- ತಿರುವಪ್ಪ ದೈವಗಳಿಂದ ಭಕ್ತರಿಗೆ ಅಭಯದ ನುಡಿ

ಸುಳ್ಯ ಕಸಬಾದ ಪೈಚಾರು ಶಾಂತಿನಗರ ಶ್ರೀ ಮುತ್ತಪ್ಪ- ತಿರುವಪ್ಪ ದೈವಗಳ
ದೈವಸ್ಥಾನದಲ್ಲಿ (ಮಡಪುರ) ಕಾಲಾವಧಿ ನೇಮೋತ್ಸವವು ಮಾ. 14 ಮತ್ತು 15 ರಂದು ಜರುಗಿತು.

ಮಾ. 14 ರಂದು ಬೆಳಗ್ಗೆ ಅರ್ಚಕರ ನೇತೃತ್ವದಲ್ಲಿ ಗಣಪತಿ ಹವನವಾಗಿ ಬಳಿಕ ಭಜನಾ ಕಾರ್ಯಕ್ರಮ ನಡೆದು, ಸಂಜೆ
ಪೈಂಗುತ್ತಿ ಹಾಗೂ ಶ್ರೀ ಮುತ್ತಪ್ಪ ದೈವದ ಮಲೆಯರ್ಕಲ್ ಬಳಿಕ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನವಾಯಿತು. ರಾತ್ರಿ ಶ್ರೀ ಮುತ್ತಪ್ಪ ದೈವದ ನೇಮ ನಡೆದುಅನ್ನಸಂತರ್ಪಣೆಯಾಯಿತು. ರಾತ್ರಿ ಕಳಿಕಪಾಟ್, ಕಳಸ ಶೃಂಗಾರ ರುಮಾಲು ಕಟ್ಟುವ ಕಾರ್ಯಕ್ರಮ ನಡೆಯಿತು . ಮರುದಿನ ಪ್ರಾತ:ಕಾಲದಲ್ಲಿ
ಶ್ರೀ ಮುತ್ತಪ್ಪ – ತಿರುವಪ್ಪ


ದೈವಗಳ ನೇಮೋತ್ಸವವು ನಡೆದು ಭಕ್ತಾದಿಗಳಿಗೆ ದೈವ ಅಭಯದ ನುಡಿ ನೀಡಿ ಪ್ರಸಾದ ವಿತರಿಸಿದರು.
ಈ ಸಂದರ್ಭದಲ್ಲಿ ಆಗಮಿಸಿದ ಭಕ್ತರಿಗೆ ಬೆಳಗ್ಗಿನ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ಮಧ್ಯಾಹ್ನ ಶ್ರೀ ದೈವಗಳ ಮಲೆ ಹತ್ತಿಸುವ ಕಾರ್ಯವಾಗಿ ಮಧ್ಯಾಹ್ನ ಸಾರ್ವಜನಿಕಅನ್ನಸಂತರ್ಪಣೆಯಾಯಿತು.

ಈ ಸಂದರ್ಭದಲ್ಲಿ ದೈವಸ್ಥಾನದಮೊಕ್ತೇಸರರಾದ ರಾಮಕೃಷ್ಣ ಎಸ್. ಎನ್ ಹರಕೆ ಸಮರ್ಪಿಸಿದ ಭಕ್ತಾದಿಗಳಿಗೆ ಪ್ರಾರ್ಥಿಸಿ ಪ್ರಸಾದ ವಿತರಿಸಿದರು.
ಸೇವಾ ಸಮಿತಿಯ ಅಧ್ಯಕ್ಷ ಪಿ. ಎಂ. ಮಧು ಸೂದನ್, ಕಾರ್ಯದರ್ಶಿ ಕೆ. ಕೆ. ಬಾಲಕೃಷ್ಣ, ಕೋಶಾಧಿಕಾರಿ ಗೌತಮ್ ಎಂ. ಸಿ ಸೇರ್ಕಜೆ, ಉತ್ಸವ ಸಮಿತಿ ಅಧ್ಯಕ್ಷ ಪೃಥ್ವಿರಾಜ್, ಕಾರ್ಯದರ್ಶಿ ನವೀನ್ ನಾಯಕ್


ಹಾಗೂ ಸಮಿತಿಯ ಸದಸ್ಯರು, ಮಹಿಳಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಸ್ಥಳೀಯ ಸಂಘ ಸಂಸ್ಥೆಯ ಸದಸ್ಯರು ಸ್ವಯಂ ಸೇವಕರಾಗಿ ಸಹಕರಿಸಿದರು. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತಾದಿಗಳು ಹರಕೆ ಸಮರ್ಪಿಸಿ ಪ್ರಸಾದ ಸ್ವೀಕರಿಸಿದರು.