ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಶಾಂತಿಸಭೆ

0

ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಶಾಂತಿಸಭೆಯು ಮಾ.15 ರಂದು ನಡೆಯಿತು.
ಠಾಣಾ ಎಸ್.ಐ.ಈರಯ್ಯರವರು ಸ್ವಾಗತಿಸಿ ಮುಂಬರುವ ರಂಜಾನ್ ಹಬ್ಬವನ್ನು ಇಲಾಖಾ ನಿಯಮಗಳನ್ನು ಪಾಲಿಸಿಕೊಂಡು ಆಚರಿಸುವಂತೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಆಚರಿಸುವಂತೆ ಹೇಳಿದರು.ರಾತ್ರಿ ನಿಗದಿಪಡಿಸಿದ ಸಮಯದಲ್ಲಿ ಕಾರ್ಯಕ್ರಮ ನಡೆಸುವಂತೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿಕೊಂಡು ಹಬ್ಬಗಳನ್ನು ಆಚರಿಸುವಂತೆ ಹೇಳಿದರು.
ಸಭೆಯಲ್ಲಿ ಕೂರ ಮಸೀದಿಯ ಅಧ್ಯಕ್ಷ ಅಬೂಬಕ್ಕರ್,ಅಬ್ದುಲ್ ಗಫೂರ್ ಕಲ್ಮಡ್ಕ, ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯ.ಸ.ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು,ಆರ್.ಕೆ.ಭಟ್‌ ಕುರುಂಬುಡೇಲು,ರಜಾಕ್ ಸವಣೂರು,ರಫೀಕ್ ಸವಣೂರು,ಇಸ್ಮಾಯಿಲ್ ಪಣೆಮಜಲು,ಐಯೂಬ್ ತಂಬಿನಮಕ್ಕಿ,ಹಸೈನಾರ್ ಸಮಹಾದಿ,ಮಹಮ್ಮದ್ ಮುಚ್ವಿಲ,ಅಜರುದ್ದೀನ್ ಬೆಳ್ಳಾರೆ ಹಾಗೂ ಮತ್ತಿತರ ಮಸೀದಿಗಳ ಮುಖಂಡರು,ಪದಾಧಿಕಾರಿಗಳು ಉಪಸ್ಥಿತರಿದ್ದರು.