ರಸ್ತೆಯಲ್ಲಿ ಅಡ್ಡ ಬಂದ ನಾಯಿಗೆ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಪಲ್ಟಿ

0

ಜಯನಗರದ ಧರ್ಮ ಗುರುಗಳಿಗೆ ಗಾಯ,ಮಂಗಳೂರು ಆಸ್ಪತ್ರೆಗೆ ದಾಖಲು

ಜಯನಗರ ನಿವಾಸಿ ಹಾಗೂ ಧರ್ಮ ಗುರುಗಳಾದ ಬಶೀರ್ ಸಕಾಫಿ ಎಂಬುವವರು ಕಾವು ಸಮೀಪ ದ್ವಿಚಕ್ರ ವಾಹನ ಅಪಘಾತದಿಂದ ಗಂಭೀರ ಗಾಯವಾಗಿ ಮಂಗಳೂರು ಆಸ್ಪತ್ರೆಗೆ ದಾಖಲಾದ ಘಟನೆ ಮಾರ್ಚ್ 16 ರಂದು ಸಂಜೆ ನಡೆದಿದೆ.

ಗಾಯಗೊಂಡವರು ಜಯನಗರ ನಿವಾಸಿ ಬಸೀರ್ ಸಕಾಫಿ ಎಂಬುವರಾಗಿದ್ದು ಅವರು ಪುತ್ತೂರಿನಿಂದ ಸುಳ್ಯ ಕಡೆ ಬರುತ್ತಿದ್ದ ಸಂದರ್ಭ ಕಾವು ಸಮೀಪ ರಸ್ತೆಯಲ್ಲಿ ನಾಯಿ ಏಕಾಏಕಿ ಅಡ್ಡ ಬಂದಿದ್ದು ನಿಯಂತ್ರಣ ತಪ್ಪಿ ಸ್ಕೂಟಿ ರಸ್ತೆಗೆ ಬಿದ್ದಿದೆ ಎನ್ನಲಾಗಿದೆ.

ಘಟನೆಯಿಂದ ಸವಾರರ ಹಣೆಯ ಭಾಗ,ಕೈ ಹಾಗೂ ಭುಜದ ಭಾಗಕ್ಕೆ ತೀವ್ರತರದ ಪೆಟ್ಟಾಗಿದ್ದು ಸ್ಥಳೀಯ ಅವರನ್ನು ಕೂಡಲೆ ತಮ್ಮ ವಾಹನದಲ್ಲಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲಿಸಿದ್ದಾರೆ. ಅಲ್ಲಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಖಾಸಗಿ ಆಸ್ಪತ್ರೆಗೆ ಸುಳ್ಯದ ಆಂಬುಲೆನ್ಸ್ ಮೂಲಕ ರವಾನಿಸಲಾಗಿದೆ.