













ಪಿಕಪ್- ಸ್ಕೂಟಿ ಅಪಘಾತದಲ್ಲಿ ಗಾಯಗೊಂಡಿದ್ದ ಐವರ್ನಾಡಿನ ಲೋಕೇಶ ನೂಜಾಲುರವರು ಮಾ.17 ರಂದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
3 ತಿಂಗಳ ಹಿಂದೆ ಐವರ್ನಾಡಿನ ಚೀಮುಳ್ಳು ಎಂಬಲ್ಲಿ ಸ್ಕೂಟಿ ಮತ್ತು ಪಿಕಪ್ ಅಪಘಾತವಾಗಿ ತೀವ್ರ ಗಾಯಗೊಂಡಿದ್ದ ಇವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಲ್ಲಿ ಕೆಲವು ದಿನಗಳ ಚಿಕಿತ್ಸೆ ಪಡೆದು ಇವರು ಮನೆಗೆ ಬಂದಿದ್ದರು.
ಇಂದು ಬೆಳಿಗ್ಗೆ ಅವರು ಮನೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಅವರಿಗೆ 50 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಮತ್ತು ಇಬ್ಬರು ಪುತ್ರಿಯರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.







