ಪೈಚಾರ್ ಬದ್ರಿಯಾ ಜುಮಾ ಮಸೀದಿನಲ್ಲಿ ಸಂಭ್ರಮದ ಈದ್ ಆಚರಣೆ

0

ಪೈಚಾರು ಬದ್ರಿಯಾ ಜುಮಾ ಮಸೀದಿಯಲ್ಲಿ ಸಂಭ್ರಮದ ಈದುಲ್ ಫಿತರ್ ಮಾ 20 ರಂದು ಆಚರಿಸಲಾಯಿತು.

ಸ್ಥಳೀಯ ಮಸೀದಿ ಖತೀಬರಾದ ಸಮೀರ್ ಅಹಮದ್ ನಈಮಿ ಈದ್ ನಮಾಜ್ ನೇತೃತ್ವವನ್ನು ವಹಿಸಿ ಈದ್ ಸಂದೇಶವನ್ನು ನುಡಿದರು.ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಇಬ್ರಾಹಿಂ ಪಿ ಹಾಗೂ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಸ್ಥಳೀಯ ಮುಸಲ್ಮಾನ ಬಾಂಧವರು ಭಾಗವಹಿಸಿ ಪರಸ್ಪರ ಈದ್ ಶುಭಾಶಯಗಳನ್ನು ಹಂಚಿಕೊಂಡರು.