














ಜಾಲ್ಸೂರು – ಚೆರ್ಕಳ ರಸ್ತೆಯ ಮಧ್ಯೆ ರಸ್ತೆ ಡಾಮರೀಕರಣ ಆರಂಭವಾಗಿರುವುದರಿಂದ, ಈ ಮಾರ್ಗದ ನಿರ್ದಿಷ್ಟ ಸ್ಥಳದಲ್ಲಿ ಮಾರ್ಚ್ 23 ರಿಂದ ಎಪ್ರಿಲ್ 5 ರವರೆಗೆ ಸಂಚಾರ ನಿಷೇಧಿಸಲಾಗಿದೆ.
ಚೆರ್ಕಳದಿಂದ ಜಾಲ್ಸೂರಿಗೆ ಬರುವ ವಾಹನಗಳು ಪಡಿಯತ್ತಡ್ಕದಿಂದ ಬಲಭಾಗಕ್ಕೆ ತಿರುಗಿ ಅಡೂರು ಮತ್ತು ಕೊಟ್ಯಾಡಿ ಮೂಲಕ ಬರಬೇಕು.
ಜಾಲ್ಸೂರಿನಿಂದ ಚೆರ್ಕಳಕ್ಕೆ ಹೋಗುವ ವಾಹನಗಳು ಕೊಟ್ಯಾಡಿಯಿಂದ ಎಡಭಾಗಕ್ಕೆ ತಿರುಗಿ ಅಡೂರು ಮೂಲಕ ಹೋಗಿ ಪಡಿಯತಡ್ಕ ತಲುಪಿ ಚೆರ್ಕಳಕ್ಕೆ ಹೋಗಬೇಕು ಎಂದು ಪಿಡಬ್ಲ್ಯೂಡಿ ರಸ್ತೆಗಳ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.






