ಮೊಬೈಲ್‌ನ ಬ್ಯಾಟರಿ ಸ್ಪೋಟ: ಕಾಲಿಗೆ ಗಾಯ

0

ಕಲ್ಮಕಾರಿನಲ್ಲಿ ನಡೆದ ಘಟನೆ



ಮೊಬೈಲ್ ಬ್ಯಾಟರಿ ಸ್ಪೋಟಗೊಂಡು ಕಾಲಿಗೆ ಗಾಯಗಳಾದ ಘಟನೆ ಕಲ್ಮಕಾರಿನಿಂದ ಇಂದು ಬೆಳಗ್ಗೆ ವರದಿಯಾಗಿದೆ.

ಕಲ್ಮಕಾರಿನ ಗುರುಪ್ರಸಾದ್ ನಿಡುಬೆ ಎಂಬವರು ವಿವೋ ವೈ 1೦೦ ಎ ಮೊಬೈಲ್ ಉಪಯೋಗಿಸುತ್ತಿದ್ದು, ಇಂದು ಮೊಬೈಲನ್ನು ತನ್ನ ಪ್ಯಾಂಟ್‌ನ ಕಿಸೆಯೊಳಗೆ ಹಾಕಿಕೊಂಡಿದ್ದರು. ಜೇಬಿನೊಳಗಿದ್ದ ಮೊಬೈಲ್ ಒಮ್ಮೆಗೇ ಸ್ಪೋಟಗೊಂಡು ಕಾಲಿನ ತೊಡೆಯ ಭಾಗಕ್ಕೆ ಗಾಯಗಳಾಯಿತು.
ಬೆಂಕಿ ಹತ್ತಿಕೊಳ್ಳದಿದ್ದರೂ ಮೊಬೈಲ್ ನ ಬ್ಯಾಟರಿಯ ಭಾಗ ಸಂಪೂರ್ಣ ಕಪ್ಪಾಗಿದ್ದು, ಬಾಂಬ್ ಸ್ಪೋಟಗೊಂಡ ರೀತಿಯಲ್ಲಿ ಹೊಗೆ ಹಾಗೂ ಶಬ್ದವೂ ಬಂತು. ಕಾಲಿಗೂ ಗಾಯವಾವಾಗಿದ್ದು, ಕಾಲಿನ ತೊಡೆಯ ಭಾಗದಲ್ಲಿ ಮೊಬೈಲ್ ಇದ್ದ ಜಾಗದ ಚರ್ಮ ಬೆಂದು ಹೋಗಿದೆ. ಗಾಯಕ್ಕೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ತೆರಳಿರುವುದಾಗಿ ತಿಳಿದು ಬಂದಿದೆ.