ಹರಿಹರ ಪಲ್ಲತಡ್ಕ: ಉಚಿತ ನೇತ್ರ ತಪಾಸಣೆ, ಹಾಗೂ ರಕ್ತದಾನ ಶಿಬಿರ

0

36 ಮಂದಿ ರಕ್ತದಾನ, 99 ಮಂದಿ ನೇತ್ರ ತಪಾಸಣೆ

ವಿವೇಕ ಜಾಗ್ರತ ಬಳಗ ಹರಿಹರ ಪಲ್ಲತ್ತಡ್ಕ, ಸುಬ್ರಹ್ಮಣ್ಯ ಇವರ ನೇತೃತ್ವದಲ್ಲಿ ಹಾಗು ವಿವಿದ ಸಂಘ ಸಂಸ್ಥೆಗಳ ಸಹಾಕಾರದೊಂದಿಗೆ ಉಚಿತ ನೇತ್ರ ತಪಾಸಣೆ, ಹಾಗು ರಕ್ತದಾನ ಶಿಬಿರವು ಶ್ರೀ ಹರಿಹರೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಮಾ.21 ರಂದು ನಡೆಯಿತು.


ಶಿಬಿರದ ಉದ್ಘಾಟನೆಯನ್ನು ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಜಗದೀಶ್ ಪಡ್ಪು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ‌
ಮುಖ್ಯ ಅತಿಥಿಗಳಾಗಿ ವಿವೇಕ ಜಾಗ್ರತ ಬಳಗದ ಹಿರಿಯ ಕಾರ್ಯಕರ್ತರಾದ ಡಾ.ಚಂದ್ರಶೇಖರ ಕಿರಿಭಾಗ, ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಪುತ್ತೂರು ಇದರ ವೈದ್ಯಾದಿಕಾರಿ ರಾಮಕೃಷ್ಣ ರಾವ್,ಪ್ರಸಾದ್ ನೇತ್ರಾಲಯದ ಅದಿಕಾರಿ ಮನೋಹರ್,ವಿವೇಕ ಜಾಗ್ರತ ಬಳಗ ಹರಿಹರ ಪಲ್ಲತ್ತಡ್ಕ ಸುಬ್ರಹ್ಮಣ್ಯ ಇದರ ಅದ್ಯಕ್ಷರಾದ ಉಷಾಪ್ರಭಾಕರ್ ,ಸ್ಥಳೀಯ ಸಿಎಚ್ಒ ರೇಣುಕಾ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುಂದರ ಗೌಡ ಸ್ವಾಗತಿಸಿ ಪ್ರಾಸ್ತವಿಕ ಮಾತುಗಳನ್ನಾಡಿದರು. ಉಷಾಪ್ರಭಾಕರ್ ದನ್ಯವಾದರು ಮಿಥುನ್ ಹೊಪ್ಪಳೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ
36 ಯೂನಿಟ್ ರಕ್ತ ಸಂಗ್ರಹವಾದರೆ, 99 ಮಂದಿ ನೇತ್ರ ತಪಾಸಣೆ ನಡೆಸಿದರು.